ಮುಂಬೈ:ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮನೆಯಲ್ಲಿ ಮುಖ್ಯವಾದ ದಾಖಲಾತಿಗಳನ್ನ ಕದಿಯುತಿದ್ದ ಮನೆ ಕೆಲಸದ ವ್ಯಕ್ತಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಗೋಯಲ್ ಮನೆಯಲ್ಲಿ ಕೆಲ ದಿನಗಳ ಹಿಂದೆ ಬೆಳ್ಳಿ ವಸ್ತುಗಳು ಕಳುವಾಗುತ್ತಿದ್ದವು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಗೋಯಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣು ಕುಮಾರ್ ವಿಶ್ವಕರ್ಮ ಎಂಬ ವ್ಯಕ್ತಿಯನ್ನ ಬಂಧಿಸಿದ್ದಾರೆ.