ಕರ್ನಾಟಕ

karnataka

ETV Bharat / bharat

ಸಂಸತ್​ ಒಳಗೆ ಒಂದೇ ಉಸಿರಿನಲ್ಲಿ ರೈಲ್ವೆ ಸಚಿವ ಓಡಿದ್ದೇಕೆ..? - ಕ್ಯಾಬಿನೆಟ್ ಸಭೆಯ ನಂತರ ಓಡಿದರು

ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಅವರು ಅಧಿವೇಶನದ ಪ್ರಶ್ನಾವಳಿ ಅವಧಿಯಲ್ಲಿ ಭಾಗವಹಿಸಲು ಸಂಸತ್ತು ಸಂಕೀರ್ಣದಲ್ಲಿ ಒಂದೇ ಉಸಿರಿನಲ್ಲಿ ಓಡಿದ ಅವರ ನಡೆಗೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

piyush goyal seen running in the Parliament Complex to attend the Question Hour
ಪ್ರಶ್ನಾವಳಿ ಅವಧಿಯಲ್ಲಿ ಭಾಗವಹಿಸಲು ಒಂದೇ ಉಸಿರಿನಲ್ಲಿ ಓಡಿದ ರೈಲ್ವೆ ಸಚಿವ

By

Published : Dec 5, 2019, 9:47 AM IST

Updated : Dec 5, 2019, 9:56 AM IST

ನವದೆಹಲಿ:ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಅವರು ಅಧಿವೇಶನದ ಪ್ರಶ್ನಾವಳಿ ಅವಧಿಯಲ್ಲಿ ಭಾಗವಹಿಸಲು ಸಂಸತ್ತು ಸಂಕೀರ್ಣದಲ್ಲಿ ಒಂದೇ ಉಸಿರಿನಲ್ಲಿ ಓಡಿದರು. ಈ ನಡುವೆ ಅವರ ಈ ನಡೆಗೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ನಿನ್ನೆ ನಡೆದ ಕ್ಯಾಬಿನೆಟ್ ಸಭೆಯ ನಂತರ ಪ್ರಶ್ನಾವಳಿ ಅವಧಿಯಲ್ಲಿ ಹಾಜರಾಗಲು ಸಂಸತ್ತಿಗೆ ಕಾರಿನಿಂದ ಇಳಿದ ಸೆಕೆಂಡಿನಲ್ಲಿ ಕಾರಿನ ಬಾಗಿಲನ್ನು ಹಾಕದೆ ಒಂದೇ ಸಮನೇ ಅಧಿವೇಶದವರೆಗೂ ಓಡಿದರು. ಗೋಯಲ್​ ಓಡುತ್ತಿರುವ ಚಿತ್ರಗಳು ಜಾಲತಾಣದಲ್ಲಿ ವೈರಲ್​ ಆಗಿವೆ.

ಅಂತಹ ಸಮರ್ಪಿತ ನಾಯಕನೊಂದಿಗೆ ಕಾರ್ಯನಿರ್ವಹಿಸಲು ನಿಜವಾಗಿಯೂ ಸ್ಫೂರ್ತಿ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ತಮ್ಮ ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಂಸತ್ತಿನಲ್ಲಿ ದೇಶದ ಹಿತಾಸಕ್ತಿಗಾಗಿ ನಿಷ್ಠೆ, ಶ್ರದ್ಧೆಯಿಂದ ಕೆಲಸ ಮಾಡುತ್ತಿರುವ ನಿಮಗೆ ನಮ್ಮದೊಂದು ಸೆಲ್ಯೂಟ್​. ಎಲ್ಲ ಸಂಸದರು ನಿಮ್ಮಂತೆಯೇ ಕೆಲಸ ಮಾಡಲಿ. ನಿಮ್ಮನ್ನೇ ಆದರ್ಶವಾಗಿ ತೆಗೆದುಕೊಳ್ಳಲಿ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Last Updated : Dec 5, 2019, 9:56 AM IST

ABOUT THE AUTHOR

...view details