ಕೊಚ್ಚಿ (ಕೇರಳ): ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊಚ್ಚಿಯಲ್ಲಿನ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ತರಬೇತಿ ಸಂಸ್ಥೆಯನ್ನು (ಒಟಿಐ) ಉದ್ಘಾಟಿಸಿದರು.
ಔದ್ಯೋಗಿಕ ಸುರಕ್ಷತೆ -ಆರೋಗ್ಯ ತರಬೇತಿ ಸಂಸ್ಥೆ ಉದ್ಘಾಟಿಸಿದ ಪಿಣರಾಯಿ ವಿಜಯನ್ - ಕೇರಳ ಸಿಎಂ ವಿಡಿಯೋ ಕಾನ್ಫರೆನ್ಸ್
ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುವ ಜನರ ಅಪಾಯ - ಮುಕ್ತ ಮತ್ತು ಔದ್ಯೋಗಿಕ ರೋಗ ಮುಕ್ತ ಸಮಾಜ ರಚಿಸಲು ಈ ಉಪಕ್ರಮವು ಸಹಾಯ ಮಾಡುತ್ತದೆ ಎಂದು ವಿಜಯನ್ ಉದ್ಘಾಟನೆ ಸಂದರ್ಭದಲ್ಲಿ ಹೇಳಿದರು.
ಕೇರಳ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಕಾರ್ಮಿಕ, ಕೌಶಲ್ಯ ಮತ್ತು ಅಭಿವೃದ್ಧಿ ಸಚಿವ ಟಿ.ಪಿ.ರಾಮಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ - ತರಬೇತಿ ಕೇಂದ್ರವು ಕೇರಳದ ಕೈಗಾರಿಕಾ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಪರ್ಯಾಯ ನೀತಿಗಳನ್ನು ಎತ್ತಿ ಹಿಡಿಯುವ ಮೂಲಕ, ತರಬೇತಿ ಕೇಂದ್ರವು ಕಾರ್ಮಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುವ ಜನರ ಅಪಾಯ - ಮುಕ್ತ ಮತ್ತು ಔದ್ಯೋಗಿಕ ರೋಗ ಮುಕ್ತ ಸಮಾಜವನ್ನು ರಚಿಸಲು ಈ ಉಪಕ್ರಮವು ಸಹಾಯ ಮಾಡುತ್ತದೆ ಎಂದು ವಿಜಯನ್ ಉದ್ಘಾಟನೆಯಲ್ಲಿ ಹೇಳಿದರು. ಭಾರತದಲ್ಲಿ ರಾಜ್ಯ ಸರ್ಕಾರದ ಅಡಿ ಒಟಿಐ ಸ್ಥಾಪನೆಯಾದ ಮೊದಲ ಉದಾಹರಣೆಯಾಗಿದ್ದು, ಒಟಿಐ ನಿರ್ಮಾಣ ವೆಚ್ಚ 4.5 ಕೋಟಿ ರೂಪಾಯಿಯಾಗಿದೆ.