ಭುವನೇಶ್ವರ್(ಒಡಿಶಾ): ವಿಮಾನ ಪತನವಾಗಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿರುವ ಘಟನೆ ಒಡಿಶಾದ ಧೆಂಕನಾಲ್ನಲ್ಲಿರುವ ಬಿರಸಾಲ್ ವಾಯುನೆಲೆಯಲ್ಲಿ ನಡೆದಿದೆ. ಇದರಲ್ಲಿ ಒಬ್ಬ ಮಹಿಳಾ ಪೈಲೆಟ್ ಕೂಡಾ ಸೇರಿದ್ದಾರೆ.
ತರಬೇತಿ ಪಡೆಯುತ್ತಿದ್ದ ವೇಳೆ ವಿಮಾನಪತನ, ಇಬ್ಬರು ಪೈಲಟ್ಗಳ ದುರ್ಮರಣ - ಪೈಲಟ್ಗಳ ಸಾವು
ತರಬೇತಿ ವೇಳೆ ವಿಮಾನ ಪತನವಾಗಿ ಇಬ್ಬರು ಪೈಲಟ್ಗಳು ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಬಿರಸಾಲ್ ವಾಯುನೆಲೆ
ತರಬೇತಿ ವೇಳೆಯಲ್ಲೇ ಅವಘಡ ಸಂಭವಿಸಿದ್ದು, ಬಿಹಾರ ಮೂಲದ ಕ್ಯಾಪ್ಟನ್ ಸಂಜೀಬ್ ಕುಮಾರ್ ಝಾ ಹಾಗೂ ತರಬೇತಿಯಲ್ಲಿದ್ದ ತಮಿಳುನಾಡು ಮೂಲದ ಅನಿಸ್ ಫಾತಿಮಾ ವಾಯುನೆಲೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಕಂಕದಹಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.