ನವದೆಹಲಿ:ಕೊರೊನಾವೈರಸ್‌ಗೆ ಸಂಬಂಧಿಸಿದಂತೆ ಚೀನಾ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಆರು ನೂರು ಶತಕೋಟಿ ಡಾಲರ್ ಪರಿಹಾರದ ಪ್ರಕರಣವನ್ನು ದಾಖಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ದಾಖಲಿಸಲಾಗಿದೆ.
ಚೀನಾ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ: ಸುಪ್ರೀಂಗೆ ಪಿಐಎಲ್ - ಚೀನಾ ವಿರುದ್ಧ ಪ್ರಕರಣ
ಕೊರೊನಾ ವೈರಸ್ ಚೀನಾದ ಲ್ಯಾಬ್ನಲ್ಲಿ ಸೃಷ್ಟಿಯಾಗಿರುವುದಕ್ಕೆ ಪುರಾವೆಗಳಿದ್ದು, ಚೀನಾದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ಧಮೆ ದಾಖಲಿಸಲಾಗಿದೆ.
supreme court
ಕೊರೊನಾ ವೈರಸ್ ಚೀನಾದ ವುಹಾನ್ನ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದೆ ಎಂದು ಸಾಬೀತುಪಡಿಸುವ ಪುರಾವೆಗಳಿವೆ ಎಂದು ಅರ್ಜಿದಾರ ಕೆ.ಕೆ.ರಮೇಶ್ ವಾದಿಸಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಹಲವರು ಸಾವನ್ನಪ್ಪಿದ್ದಾರೆ, ಆರ್ಥಿಕತೆ ನಾಶವಾಗಿದೆ, ಆಹಾರದ ಕೊರತೆ ಉಂಟಾಗಿದೆ ಮತ್ತು ಜೀವನದ ಇತರ ಅವಶ್ಯಕತೆಗಳನ್ನು ಪುರೈಸಲು ಜನ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ.