ನವದೆಹಲಿ :ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯ ವಲಸಿಗರನ್ನು ಮರಳಿ ಕರೆತರಲು ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ನ ಸಲ್ಲಿಸಲಾಗಿದೆ. ಭಾರತೀಯ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಮಿಕರ ವಸತಿ ಶಿಬಿರಗಳಲ್ಲಿ ದುರ್ಬಲ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ.
ಕೊಲ್ಲಿ ರಾಷ್ಟ್ರಗಳಿಂದ ಕಾರ್ಮಿಕರನ್ನು ಕರೆತರಲು ಸುಪ್ರೀಂಕೋರ್ಟ್ಗೆ ಪಿಐಎಲ್.. - ಕಾರ್ಮಿಕರನ್ನು ಕರೆತರಲು ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಕೆ
ಈ ಶಿಬಿರಗಳಲ್ಲಿ ಈಗಾಗಲೇ ಹಲವಾರು ಕಾರ್ಮಿಕರಿದ್ದು, ಅಲ್ಲಿ ಮೂಲಸೌಲಭ್ಯಗಳಾದ ನೀರು ಮತ್ತು ವಸತಿ ಯಾವುದೂ ಇಲ್ಲ ಎಂದು ಅರ್ಜಿದಾರರು ಕೋರ್ಟ್ಗೆ ತಿಳಿಸಿದ್ದಾರೆ. ನಮ್ಮ ಕಾರ್ಮಿಕರಿಗೆ ಆ ರಾಷ್ಟ್ರಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ.
COVID-19 ಕಾರಣದಿಂದಾಗಿ ನಿರುದ್ಯೋಗಿಗಳಾಗಿರುವ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿಯಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಆನ್‌ಲೈನ್ ಸಮಾಲೋಚನೆ ಮತ್ತು ಅವರಲ್ಲಿ ರೋಗದ ಲಕ್ಷಣಗಳು ಕಂಡು ಬಂದಾಗ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕೆಂದು ಕೋರಲಾಗಿದೆ. ಹಲವಾರು ಗಲ್ಫ್ ರಾಜ್ಯಗಳನ್ನು ಲಾಕ್‌ಡೌನ್ ಮಾಡಿದ ಹಿನ್ನೆಲೆ ಕಾರ್ಮಿಕರನ್ನು ವಸತಿ ಶಿಬಿರಗಳಲ್ಲಿಡಲಾಗಿದೆ.
ಈ ಶಿಬಿರಗಳಲ್ಲಿ ಈಗಾಗಲೇ ಹಲವಾರು ಕಾರ್ಮಿಕರಿದ್ದು, ಅಲ್ಲಿ ಮೂಲಸೌಲಭ್ಯಗಳಾದ ನೀರು ಮತ್ತು ವಸತಿ ಯಾವುದೂ ಇಲ್ಲ ಎಂದು ಅರ್ಜಿದಾರರು ಕೋರ್ಟ್ಗೆ ತಿಳಿಸಿದ್ದಾರೆ. ನಮ್ಮ ಕಾರ್ಮಿಕರಿಗೆ ಆ ರಾಷ್ಟ್ರಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ವಲಸೆ ಕಾರ್ಮಿಕರಿಗಾಗಿ ಕತಾರ್‌ನ ಅತಿದೊಡ್ಡ ಕಾರ್ಮಿಕ ಶಿಬಿರವು ವಾಸ್ತವ ಜೈಲಾಗಿ ಮಾರ್ಪಟ್ಟಿದೆ. ಲಾಕ್‌ಡೌನ್ ವೇಳೆಯಲ್ಲಿ ನೂರಾರು ಕಾರ್ಮಿಕರು COVID-19 ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಆತಂಕಕಾರಿ ಸಂಗತಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.