ಮುಂಬೈ:ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಉದ್ಭವವಾಗಿರುವ ನೆರೆ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು, ಇದರ ಮಧ್ಯೆ ವಿವಿಧ ಗಂಜಿ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಿರುವ ಜನರಿಗೆ ನೀಡುತ್ತಿರುವ ಆಹಾರದ ವಿಷಯವಾಗಿ ವಿವಾದ ಉದ್ಭವವಾಗಿದೆ.
ಮಹಾರಾಷ್ಟ್ರದಲ್ಲಿ ನೆರೆಹಾವಳಿಯಿಂದ ರಕ್ಷಣೆ ಮಾಡಿದವರಿಗೆ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಇಚಲಕರಂಜಿ ಶಾಸಕ ಸುರೇಶ್ ಹಲ್ವಂಕರ್ ಫೋಟೋ ಹಾಕಲಾಗಿದ್ದು, ಇದೇ ವಿಷಯ ಇದೀಗ ವಿರೋಧ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಪ್ರವಾಹದಲ್ಲಿ ಸಿಲುಕಿದವರಿಗೆ ಸರಿಯಾದ ಊಟ, ಔಷಧ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸಮಯವಿಲ್ಲ. ಆದರೆ ಸ್ಟೀಕರ್ಸ್ ಪ್ರಿಂಟ್ ಮಾಡಲು ಅವರ ಬಳಿ ಸಮಯವಕಾಶವಿದೆ. ಇದು ಅವರಿಗೆ ಪ್ರಚಾರದ ಸಮಯವೇ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಧನಜಯ ಮುಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.