ಪಾಲಕ್ಕಾಡ್(ಕೇರಳ):ಜನರು ತಮ್ಮ ನಿತ್ಯದ ಬದುಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಸುತ್ತಾರೆ. ಹೀಗೆ ವ್ಯಾಪಕವಾಗಿ ಬಳಸಿರುವ ಪ್ಲಾಸ್ಟಿಕ್ ಈಗ ಮಾನವರಿಗೇ ಶಾಪವಾಗಿ ಕಾಡುತ್ತಿದೆ. ಇಂತಹದೊಂದು ನಿದರ್ಶನ ಇಲ್ಲಿದೆ ನೋಡಿ.
ಇತ್ತೀಚಿನ ದಿನಗಳಲ್ಲಿ ಬಳಸಿದಂತಹ ಪ್ಲಾಸ್ಟಿಕ್ ಬಾಟಲ್ಸ್, ಪ್ಲಾಸ್ಟಿಕ್ ಕವರ್ಗಳನ್ನು ಜನರು ಎಲ್ಲಿ ಬೇಕೆಂದರಲ್ಲಿ ಎಸೆಯುತ್ತಾರೆ. ಅದರಲ್ಲೂ ಹೆಚ್ಚಾಗಿ ಕಡಲ ತೀರದ ಪ್ರದೇಶಗಳಲ್ಲಿ ಪ್ರವಾಸಕ್ಕೆಂದು ಹೋದವರು ಕಡಲ ತೀರದಲ್ಲೇ ಪ್ಲಾಸ್ಟಿಕ್ ಬಾಟಲ್ಸ್ನ್ನು ಎಸೆದು ನಿರ್ಲಕ್ಷ್ಯ ತೋರುತ್ತಾರೆ. ಹೀಗೆ ಎಸೆದ ಪ್ಲಾಸ್ಟಿಕ್ ವಸ್ತುಗಳು ಈಗ ಮಳೆಯಿಂದಾಗಿ ಭೂ ತಾಯಿ ಈ ಎಲ್ಲ ತ್ಯಾಜ್ಯಗಳನ್ನು ಹೊರಹಾಕುತ್ತಿದ್ದಾಳೆ.
ಕಳೆದ ಕೆಲವು ವರ್ಷಗಳಿಂದ ನಾವು ನದಿ, ಸಾಗರ, ಸರೋವರ ತೀರಗಳ ಅಕ್ಕ ಪಕ್ಕದಲ್ಲಿ ಪ್ಲಾಸ್ಟಿಕ್ ವಸ್ತುಗಳು ಹರಡಿರುವುದನ್ನು ಕಂಡಿದ್ದೇವೆ. ಆದರೆ, ಭೂ ತಾಯಿ ಜನರು ಏನೇ ತನ್ನ ಒಡಲಲ್ಲಿ ಹಾಕಿದರೂ ಬೇಡ ಎನ್ನದೇ ಎಲ್ಲವನ್ನು ಸ್ವೀಕರಿದ್ದಾಳೆ. ಇಷ್ಟಾದರೂ ಪ್ಲಾಸ್ಟಿಕ್ ಬಳಕೆಯ ಪ್ರಮಾಣದಲ್ಲಿ ಮಾತ್ರ ಕಡಿಮೆಯಾಗಿಲ್ಲ. ಆದರೆ, ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದ ಮನಿಸಿಕೊಂಡ ಪ್ರಕೃತಿ ತನ್ನ ಅಂತರಾಳದಲ್ಲಿ ಅಡಗಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಜನರಿಗೆ ಪುನಃ ಹಿಂತಿರುಗಿಸುವ ಮೂಲಕ ತನ್ನ ಪ್ರತಾಪವನ್ನು ತೋರಿಸಿದೆ.