ಕರ್ನಾಟಕ

karnataka

By

Published : Jun 29, 2020, 4:41 PM IST

ETV Bharat / bharat

ಒಟಿಪಿ ಆಧಾರಿತ ಆನ್‌ಬೋರ್ಡಿಂಗ್ ವ್ಯವಸ್ಥೆ ಪರಿಚಯಿಸಿದ ಪಿಂಚಣಿ ನಿಧಿ ನಿಯಂತ್ರಕ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯೋಜನೆಯು ಒನ್‌ ಟೈಮ್ ಪಾಸ್‌ವರ್ಡ್ ಆಧಾರಿತ ಆನ್‌ಬೋರ್ಡಿಂಗ್ ಸೌಲಭ್ಯವನ್ನು ಪರಿಚಯಿಸಿದೆ.

pension
pension

ನವದೆಹಲಿ:ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಯೋಜನೆಗೆ ಒನ್‌ ಟೈಮ್ ಪಾಸ್‌ವರ್ಡ್ (ಒಟಿಪಿ) ಆಧಾರಿತ ಆನ್‌ಬೋರ್ಡಿಂಗ್ ಸೌಲಭ್ಯವನ್ನು ಪರಿಚಯಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಕ ಪಿಎಫ್‌ಆರ್‌ಡಿಎ ತಿಳಿಸಿದೆ.

ಡಿಜಿಟಲ್ ಪರಿಹಾರಗಳನ್ನು ಒದಗಿಸುವ ಪ್ರಯತ್ನದಲ್ಲಿ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಈಗಾಗಲೇ ಆನ್‌ಲೈನ್ ಎನ್‌ಪಿಎಸ್ ಖಾತೆಯನ್ನು ಕಾಗದರಹಿತ ರೀತಿಯಲ್ಲಿ ಇ-ಸಿಗ್ನೇಚರ್ ಮೂಲಕ ತೆರೆಯಲು ಅನುವು ಮಾಡಿಕೊಟ್ಟಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಎನ್‌ಪಿಎಸ್ ಖಾತೆ ತೆರೆಯುವುದನ್ನು ಇನ್ನಷ್ಟು ಸುಲಭಗೊಳಿಸಲು, ಚಂದಾದಾರರಿಗೆ ಈಗ ತಮ್ಮ ಎನ್‌ಪಿಎಸ್ ಖಾತೆಯನ್ನು ಒಟಿಪಿ ಮೂಲಕ ತೆರೆಯಲು ಅನುಮತಿ ಇದೆ ಎಂದು ಪಿಎಫ್‌ಆರ್‌ಡಿಎ ತಿಳಿಸಿದೆ.

ಈ ಪ್ರಕ್ರಿಯೆಯಲ್ಲಿ ಆಯಾ ಬ್ಯಾಂಕ್​ಗಳ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಎನ್‌ಪಿಎಸ್ ಖಾತೆಯನ್ನು ತೆರೆಯಲು ಬಯಸುವ ಬ್ಯಾಂಕ್​ಗಳ ಗ್ರಾಹಕರು (ಪಿಒಪಿಗಳು - ಪಾಯಿಂಟ್ಸ್ ಆಫ್ ಪ್ರೆಸೆನ್ಸ್) ನೋಂದಾಯಿಸಿಕೊಂಡು, ಬಳಿಕ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಪಡೆದ ಒಟಿಪಿ ಬಳಸಿ ಅಂತಹ ಖಾತೆಗಳನ್ನು ತೆರೆಯಬಹುದಾಗಿದೆ.

ABOUT THE AUTHOR

...view details