ಕರ್ನಾಟಕ

karnataka

ETV Bharat / bharat

ನಾಲ್ಕನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ; ಡೀಸೆಲ್ ಬೆಲೆ ಸ್ಥಿರ - ನಾಲ್ಕು ನಗರಗಳಲ್ಲಿ ಇಂಧನ ಬೆಲೆ ಏರಿಕೆ

ಸತತ ನಾಲ್ಕನೇ ದಿನವೂ ದೇಶದ ಪ್ರಮುಖ ನಾಲ್ಕು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ. ಡೀಸೆಲ್ ಬೆಲೆ ಸ್ಥಿರವಾಗಿದೆ.

rise in petrol prices
ಪೆಟ್ರೋಲ್ ಬೆಲೆ ಏರಿಕೆ

By

Published : Aug 23, 2020, 2:22 PM IST

ನವದೆಹಲಿ : ನಾಲ್ಕು ಮೆಟ್ರೋ ನಗರಗಳಲ್ಲಿ ಸತತ ನಾಲ್ಕನೇ ದಿನವೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ.

ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 14 ಪೈಸೆ ಹೆಚ್ಚಳವಾಗಿದ್ದು, ಪ್ರತೀ ಲೀಟರ್​ಗೆ 83.01 ರೂ. ಬೆಲೆಯಿದೆ. ಈ ಹಿಂದೆ ಲೀಟರ್‌ಗೆ 82.87 ರೂ. ಇತ್ತು. ಅದೇ ರೀತಿ ದೆಹಲಿ ಮತ್ತು ಮುಂಬೈಯಲ್ಲಿ ಕೂಡ ಇಂಧನದ ಬೆಲೆಯಲ್ಲಿ ಕ್ರಮವಾಗಿ 14 ಪೈಸೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರತೀ ಲೀಟರ್​ಗೆ 81.49 ರೂ. ಮತ್ತು ಮುಂಬೈನಲ್ಲಿ 88.16 ರೂ. ಬೆಲೆಯಿದೆ. ಚೆನ್ನೈನಲ್ಲಿ ಪ್ರತಿ ಲೀಟರ್‌ಗೆ 84.52 ರೂ.ಗಳಾಗಿದ್ದು, ಶನಿವಾರ 84.40 ರೂ. ಇತ್ತು. 12 ಪೈಸೆ ಹೆಚ್ಚಾಗಿದೆ.

ನಾಲ್ಕು ಮಹಾನಗರಗಳಲ್ಲಿ ಡೀಸೆಲ್ ಬೆಲೆ ಒಂದೇ ರೀತಿಯಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ 13.25 ರಷ್ಟು ಕಡಿತಗೊಳಿಸುವುದಾಗಿ ಜುಲೈ 30 ರಂದು ಸರ್ಕಾರ ಘೋಷಿಸಿತ್ತು. ಆ ಬಳಿಕ ಡೀಸೆಲ್ ಬೆಲೆ ಸ್ಥಿರವಾಗಿದೆ. ಪ್ರತೀ ಲೀಟರ್‌ ಬೆಲೆಯಲ್ಲಿ 8.36 ರೂ. ಕಡಿತಗೊಂಡಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 73.56 ರೂ. ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಕ್ರಮವಾಗಿ 80.11, 78.86 ಮತ್ತು 77.06 ರೂ. ಇದೆ.

ABOUT THE AUTHOR

...view details