ನವದೆಹಲಿ:ಪೆಟ್ರೋಲ್ ಬೆಲೆ ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಜುಲೈ 30 ರಿಂದ ಸ್ಥಿರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 46 ಡಾಲರ್ ರಷ್ಟಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು 11 ಪೈಸೆ ಹೆಚ್ಚಿಸಿವೆ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಲೀಟರ್‌ಗೆ 10 ಪೈಸೆ ಮತ್ತು ಚೆನ್ನೈನಲ್ಲಿ ಲೀಟರ್‌ಗೆ 9 ಪೈಸೆ ಹೆಚ್ಚಳವಾಗಿದೆ.