ನವದೆಹಲಿ:ಸತತ 4 ದಿನಗಳಿಂದ ಪೆಟ್ರೋಲ್ ದರ ಏರಿಕೆಯಾಗುತ್ತಲೇ ಇದೆ. ಈ ಮೂಲಕ ವರ್ಷದಲ್ಲಿ ಈವರೆಗಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆದರೆ, ಡೀಸೆಲ್ ದರ ತಟಸ್ಥವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ, ತೈಲೋತ್ಪನ್ನ ಕಂಪನಿಗಳು ದರ ಹೆಚ್ಚಿಸಿರುವ ಪರಿಣಾಮ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ಈ ಮೂಲಕ ವಾಹನ ಸವಾರರ ಕಿಸೆಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ದೆಹಲಿ, ಕೋಲ್ಕತ್ತಾದಲ್ಲಿ ಒಂದು ಲೀಟರ್ ಪೆಟ್ರೋಲ್ಗೆ ₹ 12 ಪೈಸೆ, ಮುಂಬೈ ಮತ್ತು ಚೆನ್ನೈನಲ್ಲಿ ₹13 ಪೈಸೆ, ಬೆಂಗಳೂರಿನಲ್ಲಿ ₹7 ಪೈಸೆ ಏರಿಕೆಯಾಗಿದೆ. ಆದರೆ, ಡೀಸೆಲ್ ದರದಲ್ಲಿ ಬದಲಾವಣೆ ಕಂಡಿಲ್ಲ. ನಾಲ್ಕು ದಿನಗಳಿಂದ ದೆಹಲಿಯಲ್ಲಿ ₹46 ಪೈಸೆ ಹೆಚ್ಚಳವಾಗಿದೆ.