ನವದೆಹಲಿ: ಸತತ ನಾಲ್ಕನೇ ದಿನವೂ ನಾಲ್ಕು ಮೆಟ್ರೋ ನಗರಗಳಲ್ಲೂ ತೈಲ ಬೆಲೆ ಏರಿಳಿಕೆಯಾಗದೆ ತಟಸ್ಥವಾಗಿ ಉಳಿದಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 84.20 ರೂಪಾಯಿ ಇದೆ. ಮುಂಬೈನಲ್ಲಿ 90.83 ರೂ., ಚೆನ್ನೈನಲ್ಲಿ 83.96 ರೂ, ಕೋಲ್ಕತ್ತಾದಲ್ಲಿ 85.68 ರೂಪಾಯಿ ಇದೆ. ಕಳೆದ ಬುಧವಾರ ಮತ್ತು ಗುರುವಾರ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಪ್ರಸ್ತುತ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 56 ಡಾಲರ್ ಇದೆ.
ಇನ್ನು, ಪ್ರತಿ ಲೀಟರ್ ಡೀಸೆಲ್ಗೆ ದೆಹಲಿಯಲ್ಲಿ 74.38 ರೂ., ಮುಂಬೈನಲ್ಲಿ 81.07 ರೂ., ಚೆನ್ನೈನಲ್ಲಿ 79.72 ಮತ್ತು ಕೋಲ್ಕತ್ತಾದಲ್ಲಿ 77.97 ರೂಪಾಯಿ ಇದೆ. ದೆಹಲಿಯಲ್ಲಿ ಅಕ್ಟೋಬರ್ 4 ರಂದು ಲೀಟರ್ ಪೆಟ್ರೋಲ್ ದರ 84 ರೂಪಾಯಿಗಳಾಗಿತ್ತು. ಇದೀಗ 84.20 ರೂಪಾಯಿಗೆ ಏರಿಕೆಯಾಗಿದ್ದು, ವರ್ಷದಲ್ಲಿ ಮೊದಲನೇ ಬಾರಿಗೆ ತೈಲ ಬೆಲೆ ದುಬಾರಿಯಾಗಿದೆ.
ಸತತ ಒಂದು ತಿಂಗಳವರೆಗೆ ತೈಲ ಬೆಲೆಯನ್ನು ತಟಸ್ಥವಾಗಿ ಕಾಯ್ದುಕೊಂಡು ಬಂದಿದ್ದ ಒಎಂಸಿ (ತೈಲ ಮಾರ್ಕೆಟಿಂಗ್ ಕಂಪನಿಗಳು) ಜನವರಿ 7 ರಂದು ತೈಲ ಬೆಲೆ ಹೆಚ್ಚಿಸಿದೆ.