ನವದೆಹಲಿ: ಪೆಟ್ರೋಲ್, ಡೀಸೆಲ್ ಮುಂತಾದ ಇಂಧನ ತೈಲಗಳ ಮಾರಾಟ ಸಂಬಂಧ ಕೇಂದ್ರ ಸರ್ಕಾರ ವಿನೂತನ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದಿಡಲು ಚಿಂತನೆ ನಡೆಸಿದೆ. ಇಲ್ಲಿಯತನಕ ದೇಶದೆಲ್ಲೆಡೆ ಇಂಧನ ತೈಲಗಳನ್ನು ಪ್ರತ್ಯೇಕ ಬಂಕುಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದ್ರೆ, ಎಲ್ಲಾ ಅಂದುಕೊಂಡಂತೆ ಆದರೆ, ಭವಿಷ್ಯದಲ್ಲಿ ಸೂಪರ್ ಮಾರುಕಟ್ಟೆಗಳಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ತೈಲಗಳು ಮಾರಾಟ ವಾಗಲಿವೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಇಂಥದ್ದೊಂದು ಪ್ರಸ್ತಾಪವನ್ನು ಕ್ಯಾಬಿನೆಟ್ ಮುಂದಿಡಲಿದ್ದು, ಈಗಿರುವ ನಿಯಮಗಳನ್ನು ಸರಳೀಕರಣಗೊಳಿಸಲು ನಿರ್ಧರಿಸಿದೆ. ಇಂಧನ ತೈಲಗಳನ್ನು ಸೂಪರ್ ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು ಹಾಗು ಇನ್ನಿತರ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಲ್ಲೂ ಸೇಲ್ ಮಾಡಲು ಕೇಂದ್ರ ಉತ್ಸುಕತೆ ತೋರಿಸಿದೆ.ಈ ಮೂಲಕ ಪೆಟ್ರೋಲ್, ಡೀಸೆಲ್ ಹಾಗು ನೈಸರ್ಗಿಕ ಅನಿಲಗಳು ಚಿಲ್ಲರೆ ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ಮುಂದಾಗಿದೆ.