ನವದೆಹಲಿ: ಸತತ 16ನೇ ದಿನವೂ ತೈಲಬೆಲೆಯಲ್ಲಿ ಏರಿಕೆಯಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ನ ಬೆಲೆಯಲ್ಲಿ 33 ಪೈಸೆ ಹಾಗೂ ಡೀಸೆಲ್ನ ಬೆಲೆಯಲ್ಲಿ 58 ಪೈಸೆಯನ್ನು ಹೆಚ್ಚಿಸಿವೆ.
ಇದರಿಂದಾಗಿ ಡೀಸೆಲ್ನ ಬೆಲೆ 16 ದಿನಗಳಲ್ಲಿ ಡೀಸೆಲ್ನ ಬೆಲೆ 9 ರೂಪಾಯಿ 46ಪೈಸೆಯಷ್ಟು ಹೆಚ್ಚಳ ಕಂಡಿದೆ. ಪೆಟ್ರೋಲ್ನ ಬೆಲೆ 8 ರೂಪಾಯಿ 30 ಪೈಸೆಯಷ್ಟು ಹೆಚ್ಚಳವಾಗಿದೆ. ಇದು ವಾಹನ ಸವಾರಿಗೆ ತಲೆಬಿಸಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.