ನವದೆಹಲಿ: ಸತತ 19ನೇ ದಿನವೂ ತೈಲಬೆಲೆಯಲ್ಲಿ ಹೆಚ್ಚಳವಾಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 80 ರೂ. ಗಡಿ ತಲುಪಿದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್ ಪೆಟ್ರೋಲ್ಗೆ ಇಂದು 16 ಪೈಸೆ, ಡೀಸೆಲ್ಗೆ 14 ಪೈಸೆ ಹೆಚ್ಚಿಸಿವೆ. ಈ ಮೂಲಕ 3 ವಾರದೊಳಗಡೆ ಪೆಟ್ರೋಲ್ ಮೇಲೆ ಒಟ್ಟು 8.66 ರೂ. ಹಾಗೂ ಡೀಸೆಲ್ ಮೇಲೆ 10.63 ರೂ. ಏರಿಕೆಯಾದಂತಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೇಶದಲ್ಲಿಇದೇ ಮೊದಲ ಬಾರಿಗೆ ನಿನ್ನೆಯಿಂದ ಪೆಟ್ರೋಲ್ಗಿಂತ ಡೀಸೆಲ್ಗೆ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತೆರಿಗೆ ನೀತಿ ಇದಕ್ಕೆ ಕಾರಣವಾಗಿದೆ.