ಕರ್ನಾಟಕ

karnataka

ETV Bharat / bharat

ಕೃಷ್ಣ ಜನ್ಮಭೂಮಿ ಬಳಿ ಮಸೀದಿ: ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ - ಕೃಷ್ಣ ಜನ್ಮಭೂಮಿ ಮಸೀದಿ ಸುದ್ದಿ

ಉತ್ತರ ಪ್ರದೇಶದಲ್ಲಿ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಮಸೀದಿ ತೆರವುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿ ವಜಾಗೊಳಿಸಲಾಗಿದೆ.

Shri Krishna Birth Land Dismissed
Shri Krishna Birth Land Dismissed

By

Published : Sep 30, 2020, 7:40 PM IST

ಲಖನೌ(ಉತ್ತರ ಪ್ರದೇಶ): ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿರುವ ಮಸೀದಿ ತೆರೆವುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯ ವಜಾ ಮಾಡಿದೆ. ಮಥುರಾದ ಸಿವಿಲ್​ ಕೋರ್ಟ್​​ನಲ್ಲಿ ಇದರ ವಿಚಾರಣೆ ನಡೆಸಲಾಯಿತು.

ಅಯೋಧ್ಯೆ ರಾಮ ಮಂದಿರ ಪ್ರಕರಣದ ನಂತರ ಕೃಷ್ಣ ಜನ್ಮಭೂಮಿ ಬಳಿಯ ಮಸೀದಿ ತೆರವುಗೊಳಿಸಬೇಕು ಎಂದು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ದೇವಾಲಯದ ಪಕ್ಕದಲ್ಲಿರುವ ಮಸೀದಿ ತೆರವುಗೊಳಿಸಬೇಕು ಎಂಬುದು ವಾದವಾಗಿತ್ತು.

1669-70ರ ಮೊಗಲ್‌ ಸಾಮ್ರಾಜ್ಯದ ಔರಂಗಜೇಬ್‌ನ ಆದೇಶದಂತೆ 13.37 ಎಕರೆ ಪ್ರದೇಶದ ಕಟ್ರಾ ಕೇಶವ್‌ ದೇವ್‌ ದೇವಸ್ಥಾನದ ಆವರಣದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಈ ಮಸೀದಿಯನ್ನು ತೆರವು ಮಾಡುವಂತೆ ಕೋರಿ ಮಥುರಾದ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

1968ರ ಮಥುರಾ ಕೋರ್ಟ್ ಆದೇಶವನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದರು. ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ನಡುವೆ ಕೃಷ್ಣ ಜಮ್ಮ ಭೂಮಿ ವಿವಾದ ಏರ್ಪಟ್ಟಿದ್ದು, ದೇವಸ್ಥಾನ ವ್ಯಾಪ್ತಿಯಿಂದ ಮಸೀದಿಯನ್ನು ತೆರವು ಮಾಡಬೇಕು ಎಂದು ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಒತ್ತಾಯವಾಗಿದೆ.

ಲಖನೌದ ನಿವಾಸಿ ರಂಜನ ಅಗ್ನಿಹೋತ್ರಿ ಹಾಗೂ ಐವರು ಈ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ದೆಹಲಿ ನಿವಾಸಿ ಪರ್ವೇಶ್‌ ಕುಮಾರ್‌, ಉತ್ತರ ಪ್ರದೇಶದ ಸಿದಾರ್ಥ ನಗರ ನಿವಾಸಿ ರಾಜೇಶ್‌ ಮಣಿ ತ್ರಿಪಾಟಿ, ಬಸ್ತಿಯ ಕರುಣೇಶ್‌ ಕುಮಾರ್‌ ಶುಕ್ಲಾ ಮತ್ತು ಲಖನೌನ ಶಿವಾಜಿ ಸಿಂಗ್‌, ತ್ರಿಪುರಾರಿ ತಿವಾರಿ ಇದರಲ್ಲಿ ಸೇರಿದ್ದಾರೆ.

ಮೇಲ್ಮನವಿ ಅರ್ಜಿಯಲ್ಲಿ ನಾಲ್ಕು ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಉತ್ತರ ಪ್ರದೇಶದ ಸುನ್ನಿ ವಕ್ಫ್‌ ಮಂಡಳಿ, ಶಾಹೀದ್‌ ಮಸೀದಿ ಈದ್ಗಾ ನಿರ್ವಹಣಾ ಸಮಿತಿಗಳು, ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ನ ಕಾರ್ಯದರ್ಶಿಗಳು, ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಪ್ರಮುಖವಾದವು.

ABOUT THE AUTHOR

...view details