ನವದೆಹಲಿ: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.
370ನೇ ವಿಧಿ ರದ್ದತಿ ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್ , ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಮತ್ತು ಕಾಶ್ಮೀರ್ ಟೈಮ್ಸ್ ಸಂಪಾದಕ ಸಲ್ಲಿಸಿರುವ ಅರ್ಜಿ ಸೇರಿದಂತೆ ಒಟ್ಟು 14 ಅರ್ಜಿಗಳನ್ನು ಸುಪ್ರೀಂ ವಿಚಾರಣೆ ನಡೆಸಲಿದೆ.
'ಮೋದಿಯಿಂದ ಆರಂಭ, ನಮ್ಮಿಂದಲೇ ಮುಕ್ತಾಯ'.. ಪಾಕ್ ಸಚಿವನ ಟ್ವೀಟ್..
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಎಲ್ಲ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಲಿದೆ. ಜಸ್ಟೀಸ್ ಎಸ್.ಎ.ಬೋಬ್ಡೆ ಹಾಗೂ ಎಸ್. ಅಬ್ದುಲ್ ನಜೀರ್ ಪೀಠದ ಇನ್ನುಳಿದ ಸದಸ್ಯರಾಗಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದು ಮಾಡಿ ಕಾಶ್ಮೀರಿಗರು ಹೊಂದಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ಹಿಂಪಡೆದಿತ್ತು. ನಂತರದಲ್ಲಿ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಕ್ಕೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಗಿದೆ.