ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಹಾಗೂ ಉದ್ಯಮಿ ಪೀಟರ್ ಮುಖರ್ಜಿ ನಾಲ್ಕು ವರ್ಷಗಳ ಬಳಿಕ ಮುಂಬೈ ಜೈಲಿನಿಂದ ರಿಲೀಸ್ ಆಗಿದ್ದು, ನಿನ್ನೆ ಸಂಜೆ ಜೈಲಿನಿಂದ ಹೊರಬಂದಿದ್ದಾರೆ.
ಶೀನಾ ಬೋರಾ ಕೊಲೆ ಕೇಸ್: ನಾಲ್ಕು ವರ್ಷದ ಬಳಿಕ ಪೀಟರ್ ಮುಖರ್ಜಿ ಜೈಲಿನಿಂದ ರಿಲೀಸ್ - ಪೀಟರ್ ಮುಖರ್ಜಿ
ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಪೀಟರ್ ಮುಖರ್ಜಿ ಇದೀಗ ಜೈಲಿನಿಂದ ರಿಲೀಸ್ ಆಗಿದ್ದಾರೆ.
Peter Mukerjea released from jail after four years
24 ವರ್ಷದ ಶೀನಾ ಬೋರಾಳನ್ನ ಇಂದ್ರಾಣಿ ಕೊಲೆ ಮಾಡಿದ್ದಳು. ಇದಕ್ಕೆ ಪೀಟರ್ ಸಹಕಾರ ನೀಡಿದ್ದರು ಎನ್ನಲಾದ ಆರೋಪವಿತ್ತು. ಹೀಗಾಗಿ 2015ರಿಂದ ಇಬ್ಬರು ಜೈಲು ಕಂಬಿ ಎಣಿಸುತ್ತಿದ್ದರು. ಇದೀಗ ಬಾಂಬೆ ಹೈಕೋರ್ಟ್ನಿಂದ ಜಾಮೀನು ಸಿಕ್ಕಿರುವ ಕಾರಣ ಅವರು ಹೊರಬಂದಿದ್ದಾರೆ.
ಶೀನಾ ಬೋರಾ ಇಂದ್ರಾಣಿಯ ಮೊದಲ ಸಂಬಂಧಕ್ಕೆ ಜನಿಸಿದ ಮಗಳು. 2012ರಲ್ಲಿ ಈಕೆಯ ಕೊಲೆ ಮಾಡಲಾಗಿತ್ತು. 47 ವರ್ಷದ ಇಂದ್ರಾಣಿ ಹಾಗೂ 65 ವರ್ಷದ ಪೀಟರ್ ಮುಖರ್ಜಿ 2002ರಲ್ಲಿ ವಿವಾಹವಾಗಿದ್ದರು.