ಕರ್ನಾಟಕ

karnataka

ETV Bharat / bharat

ಮಂದಿರ ಕನಸು ನನಸು: ಮೋದಿ ಭೇಟಿಗಾಗಿ 700 ಕಿ.ಮೀ. ಕಾಲ್ನಡಿಗೆ ಆರಂಭಿಸಿದ ವ್ಯಕ್ತಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಇದರ ಮಧ್ಯೆ ವ್ಯಕ್ತಿಯೊಬ್ಬರು 700 ಕಿ.ಮೀ ಕಾಲ್ನಡಿಗೆ ಮೂಲಕ ಸಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.

Sanjay Sharma
Sanjay Sharma

By

Published : Aug 29, 2020, 2:58 PM IST

ಗ್ವಾಲಿಯರ್​​:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್​​ 5ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೇರವೆೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಬಹುಕಾಲದ ಕನಸು ನನಸಾಗಿದೆ ಎಂದು ವ್ಯಕ್ತಿಯೊಬ್ಬರು ಸುಮಾರು 700 ಕಿಲೋ ಮೀಟರ್​​ ಕಾಲ್ನಡಿಗೆ ಮೂಲಕ ಮೋದಿ ಭೇಟಿಯಾಗಿ ಧನ್ಯವಾದ ಅರ್ಪಿಸಲು ತೀರ್ಮಾನಿಸಿದ್ದಾರೆ.

ಮಧ್ಯಪ್ರದೇಶದ ರಾಜಗಢದಲ್ಲಿರುವ ಸಂಜಯ್​​ ಶರ್ಮಾ ಈ ಸಂಕಲ್ಪ ಮಾಡಿದ ವ್ಯಕ್ತಿ.

ನಮೋ ಭೇಟಿಗಾಗಿ 700 ಕಿ.ಮೀ. ಕಾಲ್ನಡಿಗೆ ಆರಂಭಿಸಿದ ವ್ಯಕ್ತಿ

ಸಂಜಯ್​​ ಶರ್ಮಾ ಆಗಸ್ಟ್​ 19ರಂದು ತಮ್ಮ ಪ್ರಯಾಣ ಆರಂಭಿಸಿದ್ದಾರೆ. 9 ದಿನಗಳ ಕಾಲ್ನಡಿಗೆಯಲ್ಲಿ 350 ಕಿಲೋ ಮೀಟರ್​ ಕ್ರಮಿಸಿರುವ ಅವರು ಸದ್ಯ ಗ್ವಾಲಿಯಾರ್​ ತಲುಪಿದ್ದು ಅಲ್ಲಿ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ಇದಾದ ಬಳಿಕ ದೆಹಲಿ ತಲುಪಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದು ಜಮ್ಮುಕಾಶ್ಮೀರದಲ್ಲಿನ ಆರ್ಟಿಕಲ್​ 370 ರದ್ಧತಿ, ಸ್ವಚ್ಛ ಭಾರತ ಅಭಿಯಾನ, ಆತ್ಮನಿರ್ಭರ​ ಭಾರತ ಯೋಜನೆಗಳಿಗಾಗಿ ಪ್ರಧಾನಿಗೆ ಈ ವೇಳೆ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

ABOUT THE AUTHOR

...view details