ನವದೆಹಲಿ :ಅಗತ್ಯವಿಲ್ಲದ ಹೊರತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರು ಶ್ರಮಿಕ್ ರೈಲುಗಳಲ್ಲಿ ಪ್ರಯಾಣಿಸುವುದನ್ನು ಕಡಿಮೆ ಮಾಡಿ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮನವಿ ಮಾಡಿದ್ದಾರೆ.
ಅನಾರೋಗ್ಯ ಇರುವವರು ಅನಗತ್ಯ ರೈಲ್ವೆ ಪ್ರಯಾಣ ಮಾಡಬೇಡಿ : ಪಿಯೂಷ್ ಗೋಯಲ್ ಮನವಿ - ಕೇಂದ್ರ ರೈಲ್ವೆ ಸಚಿವರಿಂದ ಮನವಿ
ಅತ್ಯಂತ ಅಗತ್ಯ ಸಂದರ್ಭಗಳನ್ನು ಹೊರತು ಗರ್ಭಿಣಿಯರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು, ಹತ್ತು ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ದರು ರೈಲು ಪ್ರಯಾಣ ಮಾಡುವುದುನ್ನು ಕಡಿಮೆ ಮಾಡಿ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮನವಿ ಮಾಡಿದ್ದಾರೆ.
ಈ ಬ್ಗಗೆ ಟ್ವೀಟ್ ಮಾಡಿರುವ ಗೋಯಲ್, ರೈಲ್ವೆ ಪರಿವಾರ ಎಲ್ಲ ಪ್ರಯಾಣಿಕರ ಸುರಕ್ಷತೆ ಕಾಪಾಡುವಲ್ಲಿ ಬದ್ದವಾಗಿದೆ. ಆದರೆ, ಅತ್ಯಂತ ಅಗತ್ಯ ಸಂದರ್ಭಗಳನ್ನು ಹೊರತು ಗರ್ಭಿಣಿಯರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು, ಹತ್ತು ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ದರು ರೈಲು ಪ್ರಯಾಣ ಮಾಡುವುದುನ್ನು ಕಡಿಮೆ ಮಾಡಿ ಎಂದು ತಿಳಿಸಿದ್ದಾರೆ.
ಬಿಹಾರದ ಮುಜಾಫರ್ಪುರ್ ರೈಲ್ವೆ ನಿಲ್ದಾಣದಲ್ಲಿ ಪುಟ್ಟ ಕಂದಮ್ಮವೊಂದು ತನ್ನ ತಾಯಿ ಮರಣ ಹೊಂದಿರುವುದರ ಪರಿವೆಯೇ ಇಲ್ಲದೇ ಆಕೆಯನ್ನು ಎಬ್ಬಿಸಲು ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಗೋಯಲ್ ಈ ರೀತಿ ಟ್ವೀಟ್ ಮಾಡಿದ್ದಾರೆ.