ನವದೆಹಲಿ: ಎಬಿವಿಪಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋಕೋಲ್ಕತ್ತಾದ ಜಾಧವ್ಪುರ ವಿಶ್ವವಿದ್ಯಾನಿಲಯಕ್ಕೆ ಇತ್ತೀಚೆಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಅಲ್ಲಿನ ಎಡಪಂಥೀಯ ಸಂಘಟನೆಗಳಾದ ಎಎಫ್ಎಸ್ಯು ಮತ್ತು ಎಸ್ಎಸ್ಐ ಸಂಘಟನೆಯ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ 'ಸುಪ್ರಿಯೋ ಗೋ ಬ್ಯಾಕ್' ಎಂದು ಘೋಷಣೆ ಕೂಗಿ ದಾಳಿ ಮಾಡಿದ್ದರು ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ತಮ್ಮ ಮೇಲಾದ ದಾಳಿಯ ಕುರಿತು ಸಚಿವರು ಟ್ವೀಟ್ ಅಸಮಾಧಾನ ಹೊರಹಾಕಿದ್ದಾರೆ.
'ನನ್ನ ಮೇಲೆ ದಾಳಿ ಮಾಡಿದವ್ರಿಗೆ ಮಾನಸಿಕೆ ಚಿಕಿತ್ಸೆ ಕೊಡಿಸಬೇಕಿದೆ' - ಜಾಧವ್ಪುರ ವಿಶ್ವವಿದ್ಯಾನಿಲಯ
ಜಾಧವ್ಪುರ ವಿಶ್ವವಿದ್ಯಾನಿಲಯ ಆವರಣದೊಳಗೆ ಬಾಬುಲ್ ಕಾಲಿಡುತ್ತಿದ್ದಂತೆ ವಿದ್ಯಾರ್ಥಿಗಳು ಸಚಿವರನ್ನು ತಡೆದು ಒಂದು ತಾಸು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪೊಲೀಸರ ನೆರವಿನಿಂದ ಅವರು ಕಾಲೇಜು ಒಳ ಹೋದರು. ಸಂಜೆ ಕಾಲೇಜು ಕ್ಯಾಂಪಸ್ನಿಂದ ಹೊರ ಬರುವಾಗ ವಿದ್ಯಾರ್ಥಿಗಳು ಘೋಷಣೆ ಕೂಗಿ ಮತ್ತೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ತನ್ನ ಕೂದಲು ಎಳೆದು ಹಿಂಸೆ ಮಾಡಿದ್ರು ಎಂದು ಸಚಿವರು ಆಪಾದಿಸಿದ್ದರು. ಇದೀಗ ತಮ್ಮ ಮೇಲಾದ ದಾಳಿಯ ಕುರಿತು ಕೇಂದ್ರ ಸಚಿವ ಸುಪ್ರಿಯೋ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರಕೃಪೆ ಟ್ವಿಟ್ಟರ್
ಬಾಬುಲ್ ಸುಪ್ರಿಯೋ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಈ ಹೇಡಿಗಳು ಜಾಧವ್‌ಪುರ್ ವಿಶ್ವವಿದ್ಯಾನಿಲಯದ ಚಿತ್ರಣವನ್ನು ಕೆಡಿಸಲು ಮತ್ತು ಕಳಂಕ ತರಲು ಆಸ್ಪದ ನೀಡುವುದಿಲ್ಲ. ನೀವು ನಮ್ಮಿಂದ ಶೀಘ್ರದಲ್ಲೇ ಪತ್ತೆಯಾಗಲಿದ್ದೀರಾ. ಆದರೆ ಚಿಂತಿಸಬೇಡಿ, ನೀವು ನನ್ನನ್ನು ಉಪಚರಿಸಿದ ರೀತಿಯಲ್ಲಿ ನಿಮ್ಮನ್ನು ನಾವು ಪರಿಗಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ನಾವು ನಿಮ್ಮನ್ನು ‘ಮಾನಸಿಕವಾಗಿ’ ಪುನರ್ವಸತಿಗೊಳಿಸುತ್ತೇವೆ, ಈ ಮೂಲಕ ನೀವು ಮತ್ತು ನಿಮ್ಮ ಗೂಂಡಾ ಸ್ನೇಹಿತರು ವಿದ್ಯಾರ್ಥಿಗಳಂತೆ ವರ್ತಿಸಬೇಕಿದೆ ಎಂದಿದ್ದಾರೆ.