ನವದೆಹಲಿ:ದೇಶದೆಲ್ಲೆಡೆ ಇಂದು ರಂಜಾನ್ ಸಂಭ್ರಮ ಮನೆ ಮಾಡಿದೆ. ತಿಂಗಳಿನಿಂದ ಉಪವಾಸ ಆಚರಿಸಿದ ಮುಸ್ಲಿಂ ಬಾಂಧವರು ಬೆಳಗ್ಗೆಯಿಂದಲೇ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ದೇಶಾದ್ಯಂತ ರಂಜಾನ್ ಸಡಗರ: ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ - undefined
ರಂಜಾನ್ ಹಿನ್ನೆಲೆ ದೆಹಲಿಯ ಜಮಾ ಮಸೀದಿ, ಮಧ್ಯಪ್ರದೇಶದ ಭೂಪಾಲ್ನ ಈದ್ಗಾ ಮೈದಾನ, ಆಲಿಘರ್ನ ಶಾ ಜಮಾಲ್ ಮಸೀದಿ, ಗೋರಖ್ಪುರದ ಶಾಹೀದ್ ಈದ್ಗಾ ಮೈದಾನ ಸೇರಿ ಎಲ್ಲೆಡೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್
ದೆಹಲಿಯ ಜಮಾ ಮಸೀದಿ, ಮಧ್ಯಪ್ರದೇಶದ ಭೂಪಾಲ್ನ ಈದ್ಗಾ ಮೈದಾನ, ಆಲಿಘರ್ನ ಶಾ ಜಮಾಲ್ ಮಸೀದಿ, ಗೋರಖ್ಪುರದ ಶಾಹೀದ್ ಈದ್ಗಾ ಮೈದಾನ, ಬಿಹಾರದ ಪಟ್ನಾದ ಗಾಂಧಿ ಮೈದಾನ, ಜಮ್ಮುವಿನ ಈದ್ಗಾ ಮೈದಾನ ಸೇರಿ ಎಲ್ಲೆಡೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ
ಶಾಂತಿ ಸಂದೇಶ ಸಾರುವ ರಂಜಾನ್ ಹಬ್ಬಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯ ಕೋರಿದ್ದಾರೆ. ಮುಸ್ಲಿಂ ಸಹೋದರ ಹಾಗೂ ಸಹೋದರಿಯರಿಗೆ ಈದ್ ಉಲ್ ಫಿತರ್ನ ಶುಭಾಶಯಗಳು. ಈ ಹಬ್ಬ ತ್ಯಾಗ, ಭ್ರಾತೃತ್ವ ಹಾಗೂ ಸಹಾನುಭೂತಿಯ ಸಂಕೇತ. ಈ ಸಂದರ್ಭದಲ್ಲಿ ಎಲ್ಲರಿಗೂ ಸಮೃದ್ಧಿ ಸಿಗುವುದಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.