ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸಿವೆ. ಈಗಾಗಲೇ ಕಮಲ್ ಹಾಸನ್ ಜೊತೆ ಕೈ ಜೋಡಿಸಿರುವ ನಟ ರಜನಿಕಾಂತ್ ಜನತೆ ಸಿಹಿ ಸುದ್ದಿಯೊಂದು ಹೇಳಿದ್ದಾರೆ.
2021ರ ತಮಿಳುನಾಡು ಚುನಾವಣೆಯಲ್ಲಿ ಪವಾಡ... ಸ್ಪರ್ಧೆಯ ಸುಳಿವು ಕೊಟ್ರಾ ಪಡೆಯಪ್ಪ? - 2021 ತಮಿಳುನಾಡು ವಿಧಾನಸಭಾ ಚುನವಾಣೆ ಬಗ್ಗೆ ರಜನಿಕಾಂತ್ ಹೇಳಿಕೆ
ತಮಿಳುನಾಡು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೆಲ ದಿನಗಳ ಹಿಂದೆ ನಟ ಕಮಲ್ ಹಾಸನ್ ಜೊತೆ ಕೈ ಜೋಡಿಸಿರುವ ರಜನಿಕಾಂತ್ ತಮಿಳು ಜನತೆ ಶಾಕ್ ಹೇಳಿಕೆವೊಂದು ನೀಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ 2021
ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, 2021ರ ವಿಧಾನಸಭಾ ಚುನವಾಣೆಯಲ್ಲಿ ತಮಿಳುನಾಡು ಜನತೆ ದೊಡ್ಡ ಪವಾಡವನ್ನು ಕಾಣುತ್ತಾರೆ ಎಂದು ಹೇಳಿದ್ದಾರೆ.
ಈ ಮಾತಿನ ಪ್ರಕಾರ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುಳಿವು ನೀಡಿದಂತೆ ಕಾಣುತ್ತಿದೆ. ಒಟ್ಟಿನಲ್ಲಿ ತಮಿಳುನಾಡುನಲ್ಲಿ ರಾಜಕೀಯ ಚಟುವಟಿಕೆಗಳು ಈಗಿನಿಂದಲೇ ಶುರುವಾಗಿದ್ದು, ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ.