ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮೃತಪಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡಿದ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉತ್ತರಾಖಂಡ್ ಸಿಎಂ ಸಾವಿನ ವದಂತಿ: ಹಲವರ ವಿರುದ್ಧ ಪ್ರಕರಣ ದಾಖಲು - ಸೋಶಿಯಲ್ ಮೀಡಿಯಾ
"ಮುಖ್ಯಮಂತ್ರಿ ಸಾವಿಗೀಡಾಗಿದ್ದಾರೆ ಎಂಬ ಸಂದೇಶಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು ದುರದೃಷ್ಟಕರ ಹಾಗೂ ಅತ್ಯಂತ ನಾಚಿಕೆಗೇಡಿನ ವಿಷಯ. ತಪ್ಪಿತಸ್ಥರನ್ನು ಗುರುತಿಸಿ ತಕ್ಷಣ ಬಂಧಿಸುವಂತೆ ಡೆಹ್ರಾಡೂನ್ ಎಸ್ಎಸ್ಪಿ ಅವರಿಗೆ ಸೂಚಿಸಲಾಗಿದೆ" ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಜಿ ಅಶೋಕ ಕುಮಾರ ತಿಳಿಸಿದ್ದಾರೆ.
"ಮುಖ್ಯಮಂತ್ರಿ ಸಾವಿಗೀಡಾಗಿದ್ದಾರೆ ಎಂಬ ಸಂದೇಶಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು, ದುರದೃಷ್ಟಕರ ಹಾಗೂ ಅತ್ಯಂತ ನಾಚಿಕೆಗೇಡಿನ ವಿಷಯ. ತಪ್ಪಿತಸ್ಥರನ್ನು ಗುರುತಿಸಿ ತಕ್ಷಣ ಬಂಧಿಸುವಂತೆ ಡೆಹ್ರಾಡೂನ್ ಎಸ್ಎಸ್ಪಿ ಅವರಿಗೆ ಸೂಚಿಸಲಾಗಿದೆ" ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಜಿ ಅಶೋಕ ಕುಮಾರ ತಿಳಿಸಿದರು.
"ಈಗ ಅವರು ಎಲ್ಲ ಮಿತಿಗಳನ್ನು ದಾಟಿ ವರ್ತಿಸುತ್ತಿದ್ದಾರೆ. ಸುಳ್ಳು ಸುದ್ದಿ ಹರಡಿದವರು ಹಾಗೂ ಈ ಒಳಸಂಚು ರೂಪಿಸಿದವರೆಲ್ಲರನ್ನೂ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಇದೇ ವೇಳೆ, ಅಂತರ್ಜಾಲದ ಕಿಡಿಗೇಡಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.