ಮಧ್ಯಪ್ರದೇಶ:ರಾಜ್ಘರ್ ಜಿಲ್ಲೆಯ ಶಿವಪುರ ಮತ್ತು ಗರುಡ್‌ಪುರ ಗ್ರಾಮದಲ್ಲಿ ಹರಿಯುತ್ತಿರುವ ಪಾರ್ವತಿ ನದಿಯಲ್ಲಿಚಿನ್ನ ಮತ್ತು ಬೆಳ್ಳಿಯ ನಾಣ್ಯಗಳಿವೆ ಎಂಬ ಸುದ್ದಿ ಹರಿದಾಡಿದ್ದು, ನಾಣ್ಯಗಳನ್ನು ಹುಡುಕಲು ಅನೇಕರು ಮಣ್ಣು ಅಗೆಯುತ್ತಿದ್ದಾರೆ.
ಪಾರ್ವತಿ ನದಿಯಲ್ಲಿ ಚಿನ್ನ,ಬೆಳ್ಳಿ ನಾಣ್ಯಗಳಿವೆಯೆಂದು ಮಣ್ಣು ಅಗೆಯುತ್ತಿರುವ ಜನ! - ಪಾರ್ವತಿ ನದಿಯಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯ
ಎಂಟು ದಿನಗಳ ಹಿಂದೆ, ಕೆಲವು ಮೀನುಗಾರರಿಗೆ ಇದೇ ನದಿಯಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳು ದೊರಕಿದ್ದವು ಎಂಬ ಸುದ್ದಿ ಹರಿದಾಡುತ್ತಿದೆ. ಅಂದಿನಿಂದ ಜನರು ಇಲ್ಲಿಗೆ ಬಂದು ಮಣ್ಣು ಅಗೆಯುತ್ತಾ, ನಾಣ್ಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
People are thronging Shivpura and Garudpura villages in Rajgarh in Madhya Pradesh
"ಎಂಟು ದಿನಗಳ ಹಿಂದೆ, ಕೆಲವು ಮೀನುಗಾರರಿಗೆ ಇದೇ ನದಿಯಲ್ಲಿ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳು ದೊರಕಿದ್ದವು. ಅಂದಿನಿಂದ ಜನರು ಇಲ್ಲಿಗೆ ಬಂದು ಮಣ್ಣು ಅಗೆಯುತ್ತಾ, ನಾಣ್ಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ" ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಕಳೆದ ಏಳು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಹುಡುಕಲು ಜನ ಸೇರುತ್ತಿದ್ದು, ಪಾರ್ವತಿ ನದಿಗೆ ಸಮೀಪವಿರುವ ಕೆಸರಿನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೂಡಾ ಬೆಳಗ್ಗೆಯಿಂದ ಸಂಜೆಯವರೆಗೆ ಮಣ್ಣು ಅಗೆಯುತ್ತಿದ್ದಾರೆ.
Last Updated : Jan 11, 2021, 8:43 AM IST