ಕರ್ನಾಟಕ

karnataka

ETV Bharat / bharat

ಅನ್ನದಾತರ ಶಾಂತಿಯುತ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ: ರಾಹುಲ್​ ಗಾಂಧಿ - ಅನ್ನದಾತರ ಶಾಂತಿಯುತ ಸತ್ಯಾಗ್ರಹ

ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಗಳು ಕರೆದ ರಾಷ್ಟ್ರವ್ಯಾಪಿ 'ಚಕ್ಕಾ ಜಾಮ್' ಕುರಿತು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, 'ಅನ್ನದಾತರ' ಶಾಂತಿಯುತ ಸತ್ಯಾಗ್ರಹ 'ರಾಷ್ಟ್ರೀಯ ಹಿತಾಸಕ್ತಿಗೆ ಕಾರಣವಾಗಿದೆ, ಏಕೆಂದರೆ ಇದು ದೇಶಕ್ಕೆ ಹಾನಿಯುಂಟು ಮಾಡುವ ಕೃಷಿ ಕಾನೂನುಗಳ ವಿರುದ್ಧದ ಹೋರಾಟವಾಗಿದೆ ಎಂದು ಹೇಳಿದ್ದಾರೆ.

Rahul
ರಾಹುಲ್​ ಗಾಂಧಿ

By

Published : Feb 6, 2021, 2:19 PM IST

ನವದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ 'ಚಕ್ಕಾ ಜಾಮ್' 'ಅನ್ನದಾತರ' ಶಾಂತಿಯುತ ಸತ್ಯಾಗ್ರಹ 'ರಾಷ್ಟ್ರೀಯ ಹಿತಾಸಕ್ತಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಫೆಬ್ರವರಿ 6 ರಂದು ರೈತ ಸಂಘಗಳು ದೇಶಾದ್ಯಂತ 'ಚಕ್ಕಾ ಜಾಮ್' ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಘೋಷಿಸಿವೆ, ಈ ಸಂದರ್ಭದಲ್ಲಿ ಅಧಿಕಾರಿಗಳು ರೈತರು ಪ್ರತಿಭಟನೆ ನಡೆಸುತ್ತಿರುವ ಸಮೀಪದ ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಇತರೆ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ.

'ಅನ್ನದಾತರ ಶಾಂತಿಯುತ ಸತ್ಯಾಗ್ರಹದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ - ಈ ಮೂರು ಕಾನೂನುಗಳು ರೈತ-ಕಾರ್ಮಿಕರಿಗೆ ಮಾತ್ರವಲ್ಲ, ಜನರಿಗೆ ಮತ್ತು ದೇಶಕ್ಕೂ ಹಾನಿಕಾರಕವಾಗಿದೆ. ಹೀಗಾಗಿ ರೈತರಿಗೆ ನನ್ನ ಪೂರ್ಣ ಬೆಂಬಲ! ' ಎಂದು ರಾಹುಲ್​ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ರೈತರ ಪ್ರತಿಭಟನಾ ಸ್ಥಳವೊಂದರಲ್ಲಿ ಅಳವಡಿಸಿರುವ ಬ್ಯಾರಿಕೇಡ್​ಗಳ ಫೋಟೋವನ್ನು​​​ ಟ್ವಿಟರ್​ನಲ್ಲಿ ಪೋಸ್ಟ್ ಮಾಡುವ ಮೂಲಕ ರೈತರಿಗೆ ಸಮಸ್ಯೆ ಒಡ್ಡುತ್ತಿರುವ ಸರ್ಕಾರವನ್ನು ದೂಷಿಸಿದ್ದಾರೆ.

Why do you scare by the wall of fear?' ಎಂದು ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

ಸರ್ಕಾರ ಜಾರಿಗೊಳಿಸ ಹೊರಟಿರುವ ನೂತನ ಕೃಷಿ ಕಾನೂನುಗಳು ರೈತರ ಪರವಾಗಿಲ್ಲ ಎಂದು ರೈತರು ಈ ಮೂರು ಕಾನೂನೂಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳು ಕೂಡ ಈ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿವೆ. ಆದಾಗ್ಯೂ, ಹೊಸ ಕೃಷಿ ಕಾನೂನುಗಳು ರೈತರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ ಎಂದು ಸರ್ಕಾರ ಅವುಗಳನ್ನು ಸಮರ್ಥಿಸಿಕೊಂಡಿದೆ.

ABOUT THE AUTHOR

...view details