ಕರ್ನಾಟಕ

karnataka

ETV Bharat / bharat

ವಿದೇಶಿ ದೂತವಾಸರ ಭೇಟಿ ಮಾಡಿದ್ದ 8 ಪಿಡಿಪಿ ನಾಯಕರು ಪಕ್ಷದಿಂದ ವಜಾ! - 8 ನಾಯಕರನ್ನ ವಜಾ ಮಾಡಿದ ಪಿಡಿಪಿ

ಜನರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಎಂಟು ಮಂದಿ ಮಾಜಿ ಶಾಸಕರನ್ನ ಪಕ್ಷದಿಂದ ಹೊರಹಾಕಿದೆ.

PDP expels 8 leaders latest news,8 ಪಿಡಿಪಿ ನಾಯಕರು ಪಕ್ಷದಿಂದ ವಜಾ
8 ಪಿಡಿಪಿ ನಾಯಕರು ಪಕ್ಷದಿಂದ ವಜಾ

By

Published : Jan 9, 2020, 10:24 PM IST

ಶ್ರೀನಗರ:ಸರ್ಕಾರದೊಂದಿಗೆ ಚರ್ಚೆ ನಡೆಸುವ ಮೂಲಕ ಜನರ ಇಚ್ಛೆಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಎಂಟು ನಾಯಕರನ್ನ ಪಕ್ಷದಿಂದ ಹೊರಹಾಕಲಾಗಿದೆ.

ಈ ಬಗ್ಗೆ ಪಕ್ಷದ ಅಧಿಕೃತ ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿದ್ದು, ಆಗಸ್ಟ್ 5 ರ ನಂತರದ ಬೆಳವಣಿಗೆ ನಂತರ ಜನರ ಇಚ್ಛಾಶಕ್ತಿಯನ್ನ ಉಲ್ಲಂಘಿಸಿದ ಮತ್ತು ಜನರ ಭಾವನೆಗಳನ್ನ ಘಾಸಿಗೊಳಿಸಿದ ಭಾರತ ಸರ್ಕಾರದ ಏಕಪಕ್ಷೀಯ ಕ್ರಮವನ್ನ ಗಮನಿಸಿದಾಗ, ಪಕ್ಷದ ಕೆಲವು ನಾಯಕರು ರಾಜ್ಯದ ಹಿತಾಸಕ್ತಿ, ಅಧಿಕೃತ ಸ್ಥಾನ ಮತ್ತು ಪಕ್ಷದ ಪ್ರಮುಖ ನಂಬಿಕೆಗಳಿಗೆ ವಿರುದ್ಧವಾಗಿ ಹೋಗಿ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಗಮನಕ್ಕೆ ಬಂದಿದೆ.

ಮಾಜಿ ಶಾಸಕರಾದ ದಿಲಾವರ್ ಮಿರ್, ರಫಿ ಅಹ್ಮದ್ ಮಿರ್, ಜಾಫರ್ ಇಕ್ಬಾಲ್, ಅಬ್ದುಲ್ ಮಜೀದ್ ಪಡ್ರೂ, ರಾಜಾ ಮಂಜೂರ್ ಖಾನ್, ಜಾವೈದ್ ಹುಸೇನ್ ಬೇಗ್, ಕಮರ್ ಹುಸೇನ್ ಮತ್ತು ಅಬ್ದುಲ್ ರಹೀಮ್ ರಾಥರ್ ಅವರನ್ನ ಪಕ್ಷದ ಸದಸ್ಯತ್ವದಿಂದ ಹೊರಹಾಕುವಂತೆ ಶಿಸ್ತು ಸಮಿತಿ ಶಿಫಾರಸು ಮಾಡಿದೆ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ.

ಹೊರಹಾಕಲ್ಪಟ್ಟ ನಾಯಕರು ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮುರ್ಮು ಅವರನ್ನು ಭೇಟಿಯಾದ ನಿಯೋಗದ ಭಾಗವಾಗಿದ್ದರು. ಅಲ್ಲದೆ, ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ 15 ರಾಷ್ಟ್ರಗಳ ರಾಯಭಾರಿಗಳನ್ನ ಈ ಎಲ್ಲಾ ನಾಯಕರು ಭೇಟಿಯಾಗಿದ್ದರು.

ABOUT THE AUTHOR

...view details