ಕರ್ನಾಟಕ

karnataka

ETV Bharat / bharat

ಸರ್ಕಾರಿ ವಿರೋಧಿ ಪೋಸ್ಟ್ ಮಾಡಿದ್ದಕ್ಕೆ ಪಿಸಿಎಸ್​​ ಅಧಿಕಾರಿ ಸೇವೆಯಿಂದ ವಜಾ..

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ವಿರೋಧಿ ಪೋಸ್ಟ್ ಮಾಡಿದ್ದಕ್ಕಾಗಿ ಪಿಸಿಎಸ್​​ ಅಧಿಕಾರಿಯನ್ನು ಉತ್ತರಪ್ರದೇಶ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ಸರ್ಕಾರಿ ವಿರೋಧಿ ಪೋಸ್ಟ್ ಮಾಡಿದ್ದಕ್ಕೆ ಪಿಸಿಎಸ್​​ ಅಧಿಕಾರಿ ಸೇವೆಯಿಂದ ವಜಾ

By

Published : Nov 24, 2019, 3:13 PM IST

ಲಖನೌ: ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರಿ ವಿರೋಧಿ ಪೋಸ್ಟ್ ಮಾಡಿದ್ದಕ್ಕಾಗಿ ಪ್ರಾಂತೀಯ ನಾಗರಿಕ ಸೇವಾ (PCS) ಅಧಿಕಾರಿಯನ್ನು ಉತ್ತರಪ್ರದೇಶ ಸರ್ಕಾರ ಸೇವೆಯಿಂದಲೇ ವಜಾಗೊಳಿಸಿದೆ.

ಪ್ರಸ್ತುತ ರಾಜ್ಯದ ಕಂದಾಯ ಇಲಾಖೆಯಲ್ಲಿ ವಿಶೇಷ ಕರ್ತವ್ಯದ (OSD) ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಶುಕ್ಲಾ ಎಂಬುವರು ವಜಾಗೊಂಡವರು. ಇದಕ್ಕೂ ಮೊದಲು ಅವರು ಹರ್ದೋಯ್​​ನಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​​ ಮತ್ತು ಹತ್ರಾಸ್‌ನಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡಿದ್ದರು. ಅಲ್ಲದೆ ಇವರು ತಹಶೀಲ್ದಾರ್ ಆಗಿ ಕೂಡ ಸೇವೆ ಸಲ್ಲಿಸಿದ್ದರು.

ಈ ಹಿಂದೆ ಟ್ವಿಟರ್​​ನಲ್ಲಿ ಸಿಎಂ ಯೋಗಿ ವಿರೋಧಿ ಪೋಸ್ಟ್ ಮಾಡಿದ್ದಕ್ಕಾಗಿ ಸ್ವತಂತ್ರ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಭಾರಿ ಟೀಕೆಗಳು ಬಂದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಇದೇ ಕಾರಣಕ್ಕೆ ಪಿಸಿಎಸ್​​ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

For All Latest Updates

TAGGED:

ABOUT THE AUTHOR

...view details