ನವದೆಹಲಿ:ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ತಾನು ಮಾಡಿಕೊಂಡ ಅಸೂಕ್ಷ್ಮ ಟ್ವೀಟ್‌ಗೆ ಕ್ಷಮೆ ಕೇಳಿದೆ.
ಅಚಾತುರ್ಯದ ಟ್ವೀಟ್‌ಗೆ ಕ್ಷಮೆ ಕೇಳಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ - PCB latest news
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್, ತಾನು ಹಿಂದೆ ಮುಂದೆ ನೋಡದೆ ಮಾಡಿದ ಟ್ವೀಟ್‌ಗೆ ಬಳಿಕ ನೆಟ್ಟಿಗರ ಕ್ಷಮೆ ಕೇಳಿದೆ.
![ಅಚಾತುರ್ಯದ ಟ್ವೀಟ್‌ಗೆ ಕ್ಷಮೆ ಕೇಳಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್](https://etvbharatimages.akamaized.net/etvbharat/prod-images/768-512-4802462-thumbnail-3x2-jay.jpg)
ಟಿ20 ಕ್ರಿಕೆಟ್ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ರನ್ನು ಪಿಸಿಬಿ ವಜಾಗೊಳಿಸಿತ್ತು. ತರಬೇತಿ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಡ್ಯಾನ್ಸ್ ಮಾಡಿದ್ದು, ಆ ಬಳಿಕ ಸರ್ಫರಾಜ್ರನ್ನು ನಾಯತ್ವದಿಂದ ವಜಾಗೊಳಿಸಲಾಗಿದೆ ಎಂದು ಪಿಸಿಬಿ ಟ್ವೀಟ್ ಮಾಡಿತ್ತು.
ಆದರೆ ಆ ಬಳಿಕ ಎಚ್ಚೆತ್ತುಕೊಂಡಿರುವ ಪಿಸಿಬಿ, ಮರುಕ್ಷಣವೇ ಆ ಟ್ವೀಟ್ ಡಿಲೀಟ್ ಮಾಡಿದೆ. ಅಲ್ಲದೆ ಈ ಬಗ್ಗೆ ಕ್ಷಮೆ ಕೇಳಿದ್ದು, ಟ್ವೀಟ್ ಮಾಡಿರುವ ಸಮಯ ಮತ್ತು ಸಂದರ್ಭದಲ್ಲಿ ಸ್ವಲ್ಪ ಗೊಂದಲವಾಗಿದೆ. ನಿಜಾರ್ಥದಲ್ಲಿ ಇದು ಪೂರ್ವ ನಿರ್ಧರಿತ ಟ್ವೀಟ್ ಆಗಿದ್ದು, ಮುಂದಿನ ವರ್ಷದ ಟಿ20 ವಿಶ್ವಕಪ್ ಪ್ರಚಾರವಾಗಿ ಯೋಚನೆ ಮಾಡಲಾಗಿತ್ತು. ಆದರೆ ತಂಡದ ನಾಯಕತ್ವದ ಘೋಷಣೆ ಕಾರಣದಿಂದಾಗಿ ಸ್ವಲ್ಪ ಹೆಚ್ಚು-ಕಡಿಮೆ ಆಗಿದೆ ಎಂದು ಪಿಸಿಬಿ ಹೇಳಿದೆ.