ಕರ್ನಾಟಕ

karnataka

ETV Bharat / bharat

ಕೊರೊನಾ ಎದುರಿಸಲು 'ಮಹಾ' ಸರ್ಕಾರಕ್ಕೆ 2.75 ಕೋಟಿ ರೂ. ದೇಣಿಗೆ ನೀಡಿದ ಪವಾರ್ ಒಡೆತನದ ಶಿಕ್ಷಣ ಸಂಸ್ಥೆ - ದೇಣಿಗೆ ನೀಡಿದ ಶರದ್ ಪವಾರ್​

ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಒಡೆತನದ ರಾಯತ್ ಶಿಕ್ಷಣ್​ ಸಂಸ್ಥಾ ಮಹಾರಾಷ್ಟ್ರ ಸರ್ಕಾರ ಕೋವಿಡ್ ವಿರುದ್ಧ ಹೋರಾಡಲು ದೇಣಿಗೆ ನೀಡಿದೆ.

Sharad Pawar
ಶರದ್ ಪವಾರ್

By

Published : Nov 9, 2020, 10:53 PM IST

ಮುಂಬೈ :ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಒಡೆತನದ ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆಯೊಂದು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2.75 ಕೋಟಿ ರೂಪಾಯಿಯನ್ನು ಸೋಮವಾರ ದೇಣಿಗೆಯಾಗಿ ನೀಡಿದೆ.

ಪಶ್ಚಿಮ ಮಹಾರಾಷ್ಟ್ರದ ಸತಾರದಲ್ಲಿ ಪ್ರಧಾನ ಕಚೇರಿಯಿರುವ ಶರದ್ ಪವಾರ್ ಒಡೆತನದ ರಾಯತ್ ಶಿಕ್ಷಣ್​ ಸಂಸ್ಥಾ ಎಂಬ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದೆ.

ಸ್ವತಃ ಶರದ್ ಪವಾರ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ದಕ್ಷಿಣ ಮುಂಬೈನ ಅಧಿಕೃತ ನಿವಾಸ ವರ್ಷಾದಲ್ಲಿ ಭೇಟಿಯಾಗಿ 2,75,92,821 ರೂ. ದೇಣಿಗೆ ನೀಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದ ಬೆನ್ನಲ್ಲೇ ಸತಾರಾದಲ್ಲಿನ ರಾಯತ್ ಶಿಕ್ಷಣ್​​ ಸಂಸ್ಥಾದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ನೀಡಲು ನಿರ್ಧರಿಸಿದ್ದರು.

ABOUT THE AUTHOR

...view details