ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಪರೀತ ಚಳಿ. ಆದ್ರೆ ಇಲ್ಲಿನ ಏಮ್ಸ್ ಆಸ್ಪತ್ರೆ ವಿರುದ್ಧ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರನ್ನು ಕೊರೆಯುವ ಚಳಿಗೆ ನಮ್ಮನ್ನು ನೂಕುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಕೊರೆಯುವ ಚಳಿ, ಫುಟ್ಪಾತ್ನಲ್ಲೇ ರೋಗಿಗಳು, ಸಂಬಂಧಿಕರನ್ನು ಮಲಗಿಸಿದ ಏಮ್ಸ್ ಆಸ್ಪತ್ರೆ - PPatients & relatives brave chilling winter on footpath,
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ವಿರುದ್ಧ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಕೊರಿಯುವ ಚಳಿ
ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಉತ್ತರಪ್ರದೇಶ, ಬಿಹಾರ್ ಸೇರಿದಂತೆ ಸುತ್ತ-ಮುತ್ತ ರಾಜ್ಯಗಳಿಂದ ರೋಗಿಗಳು ಮತ್ತು ಅವರೊಂದಿಗೆ ರೋಗಿಗಳ ಸಂಬಂಧಿಕರು ಬರುತ್ತಾರೆ. ಬಂದ ರೋಗಿಗಳಿಗೇ ಬೆಳಗ್ಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ. ರಾತ್ರಿಯಾದಂತೆ ಅವರನ್ನು ಏಮ್ಸ್ ಆವರಣದ ಫುಟ್ಪಾತ್ನಲ್ಲೇ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಿದ್ದು, ಕೊರೆಯುವ ಚಳಿಯಲ್ಲಿ ಕಳಪೆ ಗುಣಮಟ್ಟದ ಕಂಬಳಿ ಮತ್ತು ಊಟವನ್ನು ರೋಗಿಗಳಿಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ, ಬಿಹಾರ, ಉತ್ತಪ್ರದೇಶ ಸೇರಿದಂತೆ ಸುತ್ತ-ಮುತ್ತಲ ರಾಜ್ಯದ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಆರೋಪಿಸುತ್ತಿದ್ದಾರೆ.