ಹರಿದ್ವಾರ (ಉತ್ತರಾಖಂಡ) : ಪತಂಜಲಿ ಯೋಗ ಪೀಠ ಬಿಡುಗಡೆ ಮಾಡಿರುವ ಔಷಧಕ್ಕೆ ನಾವು ಅನುಮತಿ ನೀಡಿದ್ದೇವೆ. ಆದರೆ, ಅದು ಕೊರೊನಾ ಗುಣಪಡಿಸುವ ಔಷಧವೆಂದು ಎಲ್ಲೂ ಅವರು ಪರವಾನಗಿ ಅರ್ಜಿಯಲ್ಲಿ ಉಲ್ಲೇಖಿಸಿರಲಿಲ್ಲ ಎಂದು ಉತ್ತರಾಖಂಡ ಆಯುಷ್ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಪರವಾನಗಿಗೆ ಅರ್ಜಿ ಸಲ್ಲಿಸುವಾಗ ಪತಂಜಲಿ ಕೊರೊನಾ ಔಷಧ ಎಂದು ಉಲ್ಲೇಖಿಸಿರಲಿಲ್ಲ: ಆಯುಷ್ ಅಧಿಕಾರಿ - Patanjali Corona Medicine
ಔಷಧಕ್ಕೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವಾಗ ನಾವು ರೋಗ ನಿರೋಧಕ ವರ್ಧಕ, ಕೆಮ್ಮು ಮತ್ತು ಜ್ವರಕ್ಕೆ ಔಷಧವನ್ನ ತಯಾರಿಸುತ್ತಿರುವುದಾಗಿ ಮಾತ್ರ ಪತಂಜಲಿ ತಿಳಿಸಿತ್ತು ಎಂದು ಉತ್ತರಾಖಂಡದ ಆಯುಷ್ ಅಧಿಕಾರಿ ಹೇಳಿದ್ದಾರೆ.
ಪತಂಜಲಿ ಕೊರೊನಾ ಔಷಧಿಯೆಂದು ಉಲ್ಲೇಖಿಸಿರಲಿಲ್ಲ
ಔಷಧಕ್ಕೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವಾಗ ನಾವು ರೋಗ ನಿರೋಧಕ ವರ್ಧಕ, ಕೆಮ್ಮು ಮತ್ತು ಜ್ವರಕ್ಕೆ ಔಷಧವನ್ನ ತಯಾರಿಸುತ್ತಿರುವುದಾಗಿ ಮಾತ್ರ ಪತಂಜಲಿ ತಿಳಿಸಿತ್ತು ಎಂದು ಅವರು ಹೇಳಿದ್ದಾರೆ.
ಕೊರೊನಾ ಔಷಧ ಎಂದು ತಯಾರಿಸಲು ಅವರು ಹೇಗೆ ಅನುಮತಿ ಪಡೆದರು ಎಂದು ಉತ್ತರ ಕೇಳಿ ನಾವು ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಕೊರೊನಾ ಔಷಧ ಎಂದು ಪತಂಜಲಿ ಯೋಗ ಪೀಠ ಬಿಡುಗಡೆ ಮಾಡಿದ ಕೊರೊನಿಲ್ಗೆ ಬಿಡುಗಡೆ ಮಾಡಿದ ಒಂದು ಗಂಟೆಯೊಳಗೆ ಆಯುಷ್ ಇಲಾಖೆ ನಿರ್ಬಂಧ ಹೇರಿತ್ತು.