ಹರಿದ್ವಾರ (ಉತ್ತರಾಖಂಡ):ಲಾಕ್‌ಡೌನ್ ನಡುವೆ ಪತಂಜಲಿ ತನ್ನ ಉತ್ಪನ್ನಗಳ ಬೆಲೆ ಹೆಚ್ಚಿಸಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಕೋವಿಡ್-19 ಬಿಕ್ಕಟ್ಟಿನಿಂದ ಉಂಟಾಗಿರುವ ಲಾಕ್‌ಡೌನ್ ನಡುವೆ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಈ ವೇಳೆ ಬಾಬಾ ರಾಮ್ದೇವ್ ಒಡೆತನದ ಆಯುರ್ವೇದ ಉತ್ನನ್ನಗಳ ಪತಂಜಲಿ ಕಂಪನಿ ತನ್ನ ಉತ್ಪನ್ನಗಳ ಬೆಲೆ ಹೆಚ್ಚಿಸಿರುವ ಆರೋಪ ಕೇಳಿಬಂದಿದೆ. ಅದರಲ್ಲಿಯೂ ಹಿಟ್ಟಿನ ಬೆಲೆಯಲ್ಲಿ ಶೇ. 10ರಷ್ಟು ಏರಿಕೆಯಾಗಿದ್ದು, ಈ ಹಿಂದೆ 340 ರೂ. ಇದ್ದ 10 ಕೆಜಿ ಹಿಟ್ಟನ್ನು ಇದೀಗ 375 ರೂ.ಗೆ ಪತಂಜಲಿ ಮಾರಾಟ ಮಾಡುತ್ತಿದೆ ಎಂದು ಅಂಗಡಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ.