ಹೈದರಾಬಾದ್:ಕೇರಳ, ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಹಾಗೂ ಜಾರ್ಖಂಡ್ ಸೇರಿದಂತೆ ಹಲವಾರು ರಾಜ್ಯಗಳು ಈಗ ಮತ್ತೆ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಈ ಹಿನ್ನೆಲೆ ಭಾರತದಲ್ಲಿ ಹಕ್ಕಿ ಜ್ವರ ಮೊದಲು ಯಾವಾಗ ಪತ್ತೆಯಾಯ್ತು, ಈ ವೈರಸ್ ನಿಯಂತ್ರಣ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಒಂದಿಷ್ಟು ಮಾಹಿತಿ...
ಭಾರತದಲ್ಲಿ ಫೆಬ್ರವರಿ 18, 2005ರಂದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಅತಿ ಹೆಚ್ಚು ರೋಗಕಾರಕ ಏವಿಯನ್ ಇನ್ಫ್ಲುಯೆನ್ಸ (ಹೆಚ್5ಎನ್1) ಮೊದಲ ಬಾರಿಗೆ ಪತ್ತೆಯಾಗಿತ್ತು. ನಂತರ ಮಾರ್ಚ್, 2006ರಲ್ಲಿ ಮಧ್ಯಪ್ರದೇಶದಲ್ಲಿ ಎರಡನೇ ಬಾರಿಗೆ ಈ ಸೋಂಕು ಕಂಡು ಬಂದಿತು.
ನಿಯಂತ್ರಣ ಕಾರ್ಯಾಚರಣೆಯಲ್ಲಿ ಒಟ್ಟು 10.44 ಲಕ್ಷ ಪಕ್ಷಿಗಳನ್ನು ಆರಿಸಿ ಸಾಯಿಸಲಾಯಿತು. ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಆಗಸ್ಟ್ 2006ರಲ್ಲಿ ದೇಶವು ಈ ಸೋಂಕಿನಿಂದ ಮುಕ್ತಗೊಂಡಿತು.
ಆದರೆ ಬಳಿಕ 2017 ಜುಲೈನಲ್ಲಿ ಮಣಿಪುರ ಹಾಗೂ ಮತ್ತು 2008ರಲ್ಲಿ ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿತು. ಆ ಸಂದರ್ಭದಲ್ಲಿ ಕ್ರಮವಾಗಿ 3.39 ಲಕ್ಷ ಹಾಗೂ 61.62 ಲಕ್ಷ ಪಕ್ಷಿಗಳನ್ನು ನಿಯಂತ್ರಣ ಮತ್ತು ಧಾರಕ ಕಾರ್ಯಾಚರಣೆಯಲ್ಲಿ ಕೊಲ್ಲಲಾಯಿತು.
ಇದಾದ ಬಳಿಕ ಪ್ರತಿ ರಾಜ್ಯಗಳಲ್ಲಿ ಆಗಾಗ ಹಕ್ಕಿ ಜ್ವರ ಪತ್ತೆಯಾಗುತ್ತಿದ್ದು, ಲಕ್ಷಾಂತರ ಪಕ್ಷಿಗಳನ್ನು ನಾಶಗೊಳಿಸಲಾಗಿದೆ.
ಇದೀಗ 2020ರ ಜನವರಿಯಲ್ಲಿ ಕೇರಳದಲ್ಲಿ ಪಶುಪಾಲನಾ ಅಧಿಕಾರಿಗಳು ಕೋಯಿಕೋಡ್‌ನ ಎರಡು ಕೋಳಿ ಸಾಕಣೆ ಕೇಂದ್ರಗಳಲ್ಲಿ ಹಕ್ಕಿ ಜ್ವರ ಪತ್ತೆಯಾದ ನಂತರ ರೋಗದ ಹರಡುವಿಕೆಯನ್ನು ತಡೆಯಲು ಹಾಗೂ ಸೋಂಕು ರಹಿತಗೊಳಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಅಂದಾಜು 12,000 ಪಕ್ಷಿಗಳನ್ನು ಆಯ್ಕೆ ಮಾಡಿ ನಾಶಪಡಿಸಲಾಗಿದೆ.
2020ರ ಮಾರ್ಚ್ನಲ್ಲಿ ಬಿಹಾರದಲ್ಲಿ ನೂರಕ್ಕೂ ಹೆಚ್ಚು ಪಕ್ಷಿಗಳು ಹಕ್ಕಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿವೆ. ಬಿಹಾರದಲ್ಲಿ ಹಕ್ಕಿ ಜ್ವರ (ಹೆಚ್ 5 ಎನ್ 1) ಮತ್ತು ಹಂದಿ ಜ್ವರ (ಹೆಚ್ 1 ಎನ್ 1) ಒಟ್ಟಿಗೆ ಕಾಣಿಸಿಕೊಂಡಿದ್ದು, ಪಾಟ್ನಾದ ಕೆಲವು ಪ್ರದೇಶಗಳಲ್ಲಿ ಈ ಸೋಂಕು ವ್ಯಾಪಕವಾಗಿದೆ. ಪಾಟ್ನಾ, ನಳಂದ ಮತ್ತು ನವಾಡಾ ಜಿಲ್ಲೆಗಳಲ್ಲಿ ನೂರಾರು ಕಾಗೆಗಳು ಮತ್ತು ಇತರ ಪಕ್ಷಿಗಳು ಸಾವನ್ನಪ್ಪಿದ್ದು, ಭಗಲಾಪುರ ಮತ್ತು ರೋಹ್ತಾಸ್ ಜಿಲ್ಲೆಗಳಲ್ಲಿ ಸುಮಾರು 50 ಹಂದಿಗಳು ಸಹ ಹಂದಿ ಜ್ವರದಿಂದಾಗಿ ಮೃತಪಟ್ಟಿವೆ.
2009ರಲ್ಲಿ, ಸರ್ಕಾರವು ಪ್ರಾಣಿಗಳ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣವನ್ನು ಜಾರಿಗೆ ತಂದಿದ್ದು, ಇದು ರೋಗ ಹರಡಿದ ಸಂದರ್ಭದಲ್ಲಿ ಸೋಂಕಿತ ಪ್ರಾಣಿಗಳನ್ನು ಪ್ರತ್ಯೇಕಿಸಲು ನಿರ್ದೇಶಿಸುತ್ತದೆ ಮತ್ತು ಅತೀ ಅಗತ್ಯವಿದ್ದರೆ ಅವುಗಳನ್ನು ಆರಿಸಿ ಸಾಯಿಸಲು ಅನುವು ಮಾಡಿಕೊಡುತ್ತದೆ.
ಬರ್ಡ್ ಫ್ಲೂ (ಹಕ್ಕಿ ಜ್ವರ) ಎಂದರೇನು?