ಹೈದರಾಬಾದ್:ಭಾರತೀಯ ಬಾಹಾಕ್ಯಾಶ ಸಂಸ್ಥೆ(ಇಸ್ರೋ)ಯ ಚಂದ್ರಯಾನ-2 ಅಲ್ಪಮಟ್ಟದ ಹಿನ್ನೆಡೆ ಅನುಭವಿಸಿದೆ ನಿಜ. ಆದ್ರೆ ವಿಜ್ಞಾನಿಗಳ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಇವತ್ತು ದೂರ ಪ್ರಯಾಣಕ್ಕಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ವಿಮಾನ ಏರಿದಾಗ ಅವರಿಗೆ ಸಹ ಪ್ರಯಾಣಿಕರು ಎದ್ದು ನಿಂತು ವಿಶೇಷ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ.
ವಿಮಾನದಲ್ಲಿ ಇಸ್ರೋ ಅಧ್ಯಕ್ಷರಿಗೆ ಅಪರೂಪದ ಸ್ವಾಗತ; ಪ್ರಯಾಣಿಕರಿಂದ ಚಪ್ಪಾಳೆ, ಗಗನ ಸಖಿಯರಿಂದ ಸೆಲ್ಫಿ - ವಿಕ್ರಂ ಲ್ಯಾಂಡರ್
ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ. ಶಿವನ್ ಅವರಿಗೆ ವಿಮಾನದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.
ಇಸ್ರೋ ಅಧ್ಯಕ್ಷ ಸಿವನ್
ಕೆ. ಶಿವನ್ ವಿಮಾನ ಏರುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದು, ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ವಿಮಾನದಲ್ಲಿದ್ದ ಗಗನಸಖಿಯರು ಅವರ ಜೊತೆ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ.
ಚಂದ್ರಯಾನ-2ನ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆ ಕೆ. ಶಿವನ್ ಪ್ರಧಾನಿ ನರೇಂದ್ರ ಮೋದಿಯವರನ್ನು ತಬ್ಬಿಕೊಂಡು ಕಣ್ಣಿರು ಹಾಕಿದ್ದರು. ಈ ವೇಳೆ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸಂತೈಸಿದ್ದು ಭಾರಿ ಸುದ್ದಿಯಾಗಿತ್ತು.