ಕರ್ನಾಟಕ

karnataka

ETV Bharat / bharat

ತಾಂತ್ರಿಕ ತೊಂದರೆಯಿಂದ ಹಾರದ ಏರ್​ ಇಂಡಿಯಾ ವಿಮಾನ... ಬಾಗಿಲು ಮುರಿಯಲು ಮುಂದಾದ ಪ್ರಯಾಣಿಕರು! - ಕಾಕ್​ಪಿಟ್​ ಬಾಗಿಲು ಮುರಿಯುವ ಯತ್ನ

ತಾಂತ್ರಿಕ ತೊಂದರೆಯಿಂದಾಗಿ ಹಾರಾಟ ನಡೆಸಲು ವಿಳಂಬವಾದ ಕಾರಣಕ್ಕಾಗಿ ಆಕ್ರೋಶಗೊಂಡ ಪ್ರಯಾಣಿಕರು ಕಾಕ್​ಪಿಟ್​ ಬಾಗಿಲು ಮುರಿಯುವ ವಿಫಲ ಯತ್ನ ನಡೆಸಿದ್ದಾರೆ.

Passengers allegedly manhandle Air India cabin crew
ತಾಂತ್ರಿಕ ತೊಂದರೆಯಿಂದ ಹಾರದ ಏರ್​ ಇಂಡಿಯಾ ವಿಮಾನ

By

Published : Jan 4, 2020, 8:32 PM IST

ಮುಂಬೈ: ತಾಂತ್ರಿಕ ತೊಂದರೆಯ ಕಾರಣ ಏರ್​ ಇಂಡಿಯಾ ಬೋಯಿಂಗ್​​​-865 ವಿಮಾನ ಹಾರಾಟ ಮಾಡಲು ವಿಳಂಬವಾದ ಕಾರಣ ಆಕ್ರೋಶಗೊಂಡ ಪ್ರಯಾಣಿಕರು ಕಾಕ್​ಪಿಟ್​ ಬಾಗಿಲು ಮುರಿಯಲು ಯತ್ನಿಸಿರುವ ಘಟನೆ ನಡೆದಿದೆ.

ತಾಂತ್ರಿಕ ತೊಂದರೆಯಿಂದ ಹಾರದ ಏರ್​ ಇಂಡಿಯಾ ವಿಮಾನ

ಜನವರಿ 2ರಂದು ಈ ಘಟನೆ ನಡೆದಿದ್ದು, ದೆಹಲಿ-ಮುಂಬೈ ನಡುವೆ ಪ್ರಯಾಣ ಬೆಳೆಸಬೇಕಾಗಿದ್ದ ವಿಮಾನ ತಾಂತ್ರಿಕ ತೊಂದರೆ ಕಾರಣ ಹಾರಾಟ ನಡೆಸಲು ವಿಳಂಬ ಮಾಡಿದೆ. ಈ ವೇಳೆ ಅದರೊಳಗೆ ಕುಳಿತಿದ್ದ ಪ್ರಯಾಣಿನೊಬ್ಬ ಅಶಿಸ್ತಿನಿಂದ ನಡೆದುಕೊಂಡಿದ್ದು, ಬಾಗಿಲು ತೆಗೆಯುವ ಪ್ರಯತ್ನ ನಡೆಸಿದ್ದಾನೆ. ಈ ವೇಳೆ ವಿಮಾನಯಾನ ಸಿಬ್ಬಂದಿ ಅವರ ಮನವೊಲಿಕೆ ಮಾಡುವ ಯತ್ನ ನಡೆಸಿದ್ದಾರೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ.

ಪ್ರಯಾಣಿಕನ ವರ್ತನೆ ಬಗ್ಗೆ ಈಗಾಗಲೇ ಏರ್​ ಇಂಡಿಯಾ ಮ್ಯಾನೇಜ್​​ಮೆಂಟ್​ ವರದಿ ಕೇಳಿದ್ದು, ಅದನ್ನ ಪಡೆದುಕೊಂಡ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details