ಹೈದರಾಬಾದ್: ಬಿಸ್ಕತ್ ಪೊಟ್ಟಣದಲ್ಲಿ ವಿದೇಶಿ ಕರೆನ್ಸಿಯನ್ನಿಟ್ಟು ಕಳ್ಳ ಸಾಗಣೆ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಬಿಸ್ಕತ್ ಪೊಟ್ಟಣದಲ್ಲಿತ್ತು ವಿದೇಶಿ ಕರೆನ್ಸಿ... ಐನಾತಿ ಕಳ್ಳರು ಸಿಕ್ಕಿಬಿದ್ದದ್ದು ಹೇಗೆ? - ಹೈದರಾಬಾದ್
ಬಿಸ್ಕತ್ ಪೊಟ್ಟಣದಲ್ಲಿ ವಿದೇಶಿ ಕರೆನ್ಸಿಯನ್ನಿಟ್ಟು ಕಳ್ಳ ಸಾಗಣೆ ಮಾಡಲು ಯತ್ನಿಸಿದ ಆರೋಪಿಯನ್ನು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
passenger tried to smuggle foreign currency in biscuit packet
ದುಬೈನಿಂದ ಬಂದ ಪ್ರಯಾಣಿಕರ ಮೇಲೆ ಖಚಿತ ಆಧಾರದ ದಾಳಿ ಕಸ್ಟಂ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಬ್ಬರು ಪ್ರಯಾಣಿಕರ ಬಳಿ ಇದ್ದ ಲಗೇಜ್ಅನ್ನು ಪರೀಕ್ಷಿಸಿದಾಗ ಮೇಲ್ನೋಟಕ್ಕೆ ಏನೂ ಕಾಣಿಸಲಿಲ್ಲ. ಬಿಸ್ಕತ್ ಕವರ್ಅನ್ನು ತೆಗೆದು ಪ್ಯಾಕಿಂಗ್ ಕವರ್ ಹಿಂಬದಿಯಲ್ಲಿ ಚೆಕ್ ಮಾಡಿದಾಗ ವಿದೇಶಿ ಕರೆನ್ಸಿಯನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದೆ.
ಇಬ್ಬರೂ ಪ್ರಯಾಣಿಕರು 3.50,000 ಸೌದಿ ಅರೇಬಿಯಾದ ರಿಯಾಲ್ಸ್ಗಳನ್ನು (74,37,500 ರೂಗಳು) ಸಾಗಿಸಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.