ಕರ್ನಾಟಕ

karnataka

ಕೇದಾರನಾಥ್ ಧಾಮ ಅಭಿವೃದ್ಧಿಗೆ ವಾಯುಪಡೆ ಸಾಥ್​​: ಹೆಲಿಕಾಪ್ಟರ್ ಮೂಲಕ ಯಂತ್ರಗಳ ಸಾಗಣೆ

By

Published : Oct 27, 2020, 5:46 PM IST

ಉತ್ತರಾಖಂಡದ ಸುಪ್ರಸಿದ್ಧ ಕೇದಾರನಾಥ ಧಾಮ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿಗೆ ಭಾರತೀಯ ವಾಯುಪಡೆ ಸಾಥ್ ನೀಡಿದೆ.

parts of machines sent by chinook
ಕೇದಾರನಾಥ್ ಧಾಮ ಅಭಿವೃದ್ಧಿಗೆ ವಾಯುಪಡೆ ಸಾಥ್

ಚಮೋಲಿ (ಉತ್ತರಾಖಂಡ): ಕೇದಾರನಾಥ ಧಾಮ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಉತ್ತರಾಖಂಡ ಸರ್ಕಾರದ ಜೊತೆಗೆ ಭಾರತೀಯ ವಾಯುಪಡೆ ಕೈಜೋಡಿಸಿದೆ. ಕೆಲವೊಂದು ಸಾಮಗ್ರಿಗಳನ್ನು ಸಾಗಿಸಲು ಹೆಲಿಕಾಪ್ಟರ್​ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಜೆಸಿಬಿಯ ಭಾಗಗಳು, ಟ್ರಕ್​ಗಳನ್ನು ಕೇದಾರಧಾಮ ನಿರ್ಮಾಣ ಸ್ಥಳಕ್ಕೆ ಗೌಚಾರ್ ವಾಯುನೆಲೆಯಿಂದ ಚಿನೂಕ್ ಹೆಲಿಕಾಪ್ಟರ್​ಗಳ ಮುಖಾಂತರ ಸಾಗಿಸಲಾಗುತ್ತಿದೆ. ಈಗಾಗಲೇ ಕಾರ್ಯ ಆರಂಭ ಮಾಡಿರುವ ಹೆಲಿಕಾಪ್ಟರ್​ಗಳು ಟ್ರ್ಯಾಕ್ಟರ್​ ಹಾಗೂ ಟ್ರಕ್​ಗಳನ್ನು ಸಾಗಿಸಿವೆ.

ಈಗಾಗಲೇ ಕೆಲವು ಯಂತ್ರಗಳ ಎರಡೂವರೆ ಟನ್ ಬಿಡಿಭಾಗಗಳನ್ನು ಕೇದಾರಧಾಮ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಕರ್ಣಪ್ರಯಾಗ್ ತಹಶೀಲ್ದಾರ್ ಸೋಹನ್ ಸಿಂಗ್ ರಂಗದ್ ​ಪ್ರತಿಕ್ರಿಯೆ ನೀಡಿದ್ದಾರೆ.

ಮುರು ದಿನಗಳಲ್ಲಿ ಹಲವಾರು ರೀತಿಯ ಬಿಡಿ ಭಾಗಗಳನ್ನು ಸಾಗಿಸಲಾಗಿದ್ದು, ಅವುಗಳನ್ನು ನಂತರ ಕೇದಾರಧಾಮ ಕಾಮಗಾರಿ ಸ್ಥಳದಲ್ಲಿ ಜೋಡಿಸಿಕೊಳ್ಳಲಾಗುವುದು ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಂತ್ರಗಳನ್ನು ಸಾಗಿಸಲಾಗುತ್ತಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ABOUT THE AUTHOR

...view details