ಭುವನೇಶ್ವರ್: ಒಡಿಶಾದ ಭುವನೇಶ್ವರ್ನಲ್ಲಿ ಬೆಳಗ್ಗೆ 8.20 ರಿಂದ 11.28ರವರೆಗೆ ಕಂಕಣ ಸೂರ್ಯಗ್ರಹಣ ನಡೆಯಲಿದೆ. ಈ ಸಮಯದಲ್ಲಿ ಎಲ್ಲ ದೇವಾಲಯಗಳ ಬಾಗಿಲು ಮುಚ್ಚಲಿದ್ದು, ಯಾವುದೇ ಪೂಜೆ-ಪುನಸ್ಕಾರ ನಡೆಯುವುದಿಲ್ಲ.
ಕಂಕಣ ಸೂರ್ಯಗ್ರಹಣ ನಾಳೆ ಬೆಳಗ್ಗೆ 8.20 ಕ್ಕೆ ಆರಂಭವಾಗುತ್ತದೆ. 9.46 ಗಂಟೆಯಷ್ಟರಲ್ಲಿ ಸಂಪೂರ್ಣ ಗೋಚರವಾಗುತ್ತದೆ. 11.28 ಗಂಟೆಯಷ್ಟರಲ್ಲಿ ಸಂಪೂರ್ಣವಾಗಿ ಗ್ರಹಣ ಮುಗಿದುಹೋಗುತ್ತದೆ ಎಂದು ಭುವನೇಶ್ವರದಲ್ಲಿರುವ ಹವಾಮಾನ ಇಲಾಖೆಯ ಸಲಹೆಗಾರರೊಬ್ಬರು ತಿಳಿಸಿದ್ದಾರೆ.
ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ ಇದೆ. ಈ ಹಿನ್ನೆಲೆ ಸೂರ್ಯ ದೊಡ್ಡದಾಗಿರುತ್ತಾನೆ. ಚಂದ್ರ ಅಡ್ಡ ಬಂದರೂ ಕೂಡ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬೆಂಕಿ ಉಗುಂರ ಆಕಾರದಲ್ಲಿ ಸೂರ್ಯ ಗೋಚರವಾಗುತ್ತಾನೆ ಎಂದು ಸಲಹೆಗಾರರು ಹೇಳಿದ್ದಾರೆ.