ನವದೆಹಲಿ: ದೇಶಾದ್ಯಂತ ಕೊರೊನಾ ಹರಡುವ ರಭಸ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಇದೀಗ ಶಾಸ್ತ್ರಿ ಭವನದ ಕಾನೂನು ಸಚಿವಾಲಯದ ಅಧಿಕಾರಿಯೋರ್ವನಿಗೆ ಸೋಂಕು ಕಾಣಿಸಿಕೊಂಡಿರುವ ಕಾರಣ ಶಾಸ್ತ್ರಿ ಭವನ ಸಂಪೂರ್ಣವಾಗಿ ಸೀಲ್ ಡೌನ್ ಆಗಿದೆ.
ಕಾನೂನು ಸಚಿವಾಲಯದ ಅಧಿಕಾರಿಗೆ ಕೋವಿಡ್, ದೆಹಲಿಯ ಶಾಸ್ತ್ರಿ ಭವನ ಸಿಲ್‌ಡೌನ್ - ಶಾಸ್ತ್ರಿ ಭವನ ಸಿಲ್ಡ್ಔಟ್
ಹಿರಿಯ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಕಾನೂನು ಸಚಿವರಿದ್ದ ಶಾಸ್ತ್ರಿ ಭವನದ ನಾಲ್ಕನೇ ಮಹಡಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

COVID-19 positive
ಈಗಾಗಲೇ ನೀತಿ ಆಯೋಗ ಭವನ ಬಿಲ್ಡಿಂಗ್ ಕಳೆದ ತಿಂಗಳು ಸೀಲ್ ಡೌನ್ ಮಾಡಲಾಗಿದ್ದು, ಇದರ ಬೆನ್ನಲ್ಲೇ ಇದೀಗ ಶಾಸ್ತ್ರಿ ಭವನದಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿ ಅನೇಕ ಕೇಂದ್ರ ಸಚಿವರು, ಸರ್ಕಾರಿ ಅಧಿಕಾರಿಗಳಿದ್ದರು. ಹಿರಿಯ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಕಾನೂನು ಸಚಿವರಿದ್ದ ಶಾಸ್ತ್ರಿ ಭವನದ ನಾಲ್ಕನೇ ಮಹಡಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ದೆಹಲಿಯಲ್ಲಿ ಈಗಾಗಲೇ ಸಿಆರ್ಪಿಎಫ್ ಹೆಡ್ ಕ್ವಾರ್ಟರ್ಸ್, ರಾಜೀವ್ ಗಾಂಧಿ ಭವನ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ.