ಕರ್ನಾಟಕ

karnataka

By

Published : Sep 3, 2020, 9:21 AM IST

ETV Bharat / bharat

ಪಕ್ಷಪಾತ, ಒಡಂಬಡಿಕೆ ಆರೋಪ: ಸಂಸದೀಯ ಸಮಿತಿಯಿಂದ ಎಫ್‌ಬಿ ಇಂಡಿಯಾ ಮುಖ್ಯಸ್ಥರ ವಿಚಾರಣೆ

ಪಕ್ಷಪಾತ ಮತ್ತು ಅಭಿಪ್ರಾಯಗಳ ಮೇಲೆ ಪ್ರಭಾವ ಬೀರಿದ ಆರೋಪ ಹಿನ್ನೆಲೆಯಲ್ಲಿ ಫೇಸ್​ಬುಕ್​ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್‌ ಅವರನ್ನು ಸಂಸದೀಯ ಸಮಿತಿ ವಿಚಾರಣೆ ನಡೆಸಿದೆ.

Parliamentary panel probes FB India chief
ಸಂಸದೀಯ ಸಮಿತಿಯಿಂದ ಎಫ್‌ಬಿ ಇಂಡಿಯಾ ಮುಖ್ಯಸ್ಥರ ವಿಚಾರಣೆ

ನವದೆಹಲಿ:ಫೇಸ್‌ಬುಕ್‌ನ ರಾಜಕೀಯ ಪಕ್ಷಪಾತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದೀಯ ಸಮಿತಿಯು ಫೇಸ್​ಬುಕ್​ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್‌ರನ್ನು ಎರಡು ಗಂಟೆಗಳ ಕಾಲ ಪ್ರಶ್ನಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಸದಸ್ಯರು ಸೋಷಿಯಲ್ ಮೀಡಿಯಾ ದೈತ್ಯ ಫೇಸ್​ಬುಕ್ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರಿದೆ ಎಂದು ಆರೋಪಿಸಿದ್ದು, ಈ ಆರೋಪರನ್ನು ಸಂಸ್ಥೆ ನಿರಾಕರಿಸಿದೆ.

ಬಿಜೆಪಿ ಸದಸ್ಯರು ಫೇಸ್‌ಬುಕ್ ಉದ್ಯೋಗಿಗಳ ರಾಜಕೀಯ ಸಂಪರ್ಕದ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ, ಅದರ ಹಿರಿಯ ಅಧಿಕಾರಿಗಳು ಕಾಂಗ್ರೆಸ್ ಮತ್ತು ಅದರ ನಾಯಕರೊಂದಿಗೆ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಂಡರೆ, ಪ್ರತಿಪಕ್ಷದ ಸದಸ್ಯರು ದ್ವೇಷಪೂರಿತ ಭಾಷಣ ಸೇರಿದಂತೆ ವಿಡಿಯೋಗಳು ಇನ್ನೂ ಆನ್‌ಲೈನ್‌ನಲ್ಲಿ ಏಕೆ ಲಭ್ಯವಿವೆ ಎಂದು ಕೇಳಿದ್ದಾರೆ.

ಸಮಿತಿಯ ಪ್ರತಿಪಕ್ಷದ ಸದಸ್ಯರಿಂದ ಅಜಿತ್ ಮೋಹನ್ ಅವರನ್ನು ಪ್ರಶ್ನಿಸಲಾಗಿದೆ. ಅವರು ಕೆಲವು ಪ್ರಶ್ನೆಗಳಿಗೆ ಮೌಖಿಕ ಉತ್ತರ ನೀಡಿದರು. ಆದರೆ ಅವರಿಗೆ ಸುಮಾರು 90 ಪ್ರಶ್ನೆಗಳನ್ನು ನೀಡಲಾಗಿದೆ. ಅದಕ್ಕೆ ಅವರು ಲಿಖಿತವಾಗಿ ಪ್ರತಿಕ್ರಿಯಿಸಬೇಕಾಗಿದೆ.

ಮೂಲಗಳ ಪ್ರಕಾರ, 2011ರ ವಿಧಾನಸಭಾ ಚುನಾವಣೆಗಳಲ್ಲಿ ಕೇರಳ ಕಾಂಗ್ರೆಸ್ ಘಟಕ ಮತ್ತು ಯುಪಿಎ ಸರ್ಕಾರದೊಂದಿಗಿನ ಮೋಹನ್ ಅವರ ಒಡನಾಟದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಅವರು ವೃತ್ತಿಪರರಾಗಿ ಸಂಬಂಧ ಹೊಂದಿದ್ದು, ಯಾವುದೇ ರಾಜಕೀಯ ಸಂಬಂಧ ಇರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಎಡಪಂಥೀಯ ಸಿದ್ಧಾಂತವನ್ನು ಅನುಸರಿಸುವವರು ಅಥವಾ ಕಾಂಗ್ರೆಸ್ ಜೊತೆ ಕೆಲಸ ಮಾಡಿದವರು ಫೇಸ್‌ಬುಕ್‌ಗಾಗಿ ಸತ್ಯ ಪರಿಶೀಲನೆ ನಡೆಸುವ ಮೂರನೇ ವ್ಯಕ್ತಿಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ, ಫೇಸ್‌ಬುಕ್ ಕಾರ್ಯನಿರ್ವಾಹಕ ಈ ಆರೋಪಗಳನ್ನು ನಿರಾಕರಿಸಿದ್ದು, ಕಂಪನಿಯು ವಾಕ್ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಮತ್ತು ನಿಯಮಗಳನ್ನು ಅನುಸರಿಸುವ ಮತ್ತು ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದರು.

"ಫೇಸ್‌ಬುಕ್‌ಗೆ ಸಂಬಂಧಿಸಿದ ಹಲವಾರು ವಿಷಯಗಳು ಚರ್ಚೆಯಾಗಿದವು ಮತ್ತು ಕಾಂಗ್ರೆಸ್, ಬಿಜೆಪಿ ಮತ್ತು ಫೇಸ್‌ಬುಕ್ ನಡುವಿನ ಒಡಂಬಡಿಕೆ ವಿಚಾರವನ್ನು ಎತ್ತಿಹಿಡಿದಿದೆ. ಈ ವೇಳೆ ಫೇಸ್‌ಬುಕ್‌ ಪ್ರತಿನಿಧಿ ಆರೋಪಗಳನ್ನು ನಿರಾಕರಿಸಿದ್ದಾರೆ. ಪೋಸ್ಟ್‌ಗಳನ್ನು ವರದಿ ಮಾಡುವಲ್ಲಿ ಅವರು ಜಾಗತಿಕ ಮಾನದಂಡಗಳನ್ನು ಅನುಸರಿಸುತ್ತಿರುವುದಾಗಿ ಪ್ರತಿಪಾದಿಸಿದರು. ಅಲ್ಲದೆ ಬಿಜೆಪಿಯೊಂದಿಗೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಆರೋಪ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ABOUT THE AUTHOR

...view details