ನವದೆಹಲಿ: ಕೆಲವು ಮಸೂದೆಗಳು ಮಂಡನೆಗೆ ಬಾಕಿ ಉಳಿದಿರುವುದರಿಂದ ಸಂಸತ್ ಅಧಿವೇಶನ ಆಗಸ್ಟ್ 7ರವರೆಗೆ ವಿಸ್ತರಣೆಯಾಗಿದೆ.
ಸಂಸದೀಯ ವ್ಯವಹಾರಗಳ ಸಮಿತಿ ಸಭೆ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಡನೆಯಾಗದ ವಿಧೇಯಕಗಳು: ಸಂಸತ್ ಅಧಿವೇಶನ ಆಗಸ್ಟ್ 7ರವರೆಗೆ ವಿಸ್ತರಣೆ - ಸಂಸತ್ ಅಧಿವೇಶನ , ನವದೆಹಲಿ, ಸಂಸದೀಯ ವ್ಯವಹಾರಗಳ ಸಮಿತಿ ನಿರ್ಧಾರ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ಕನ್ನಡ ವಾರ್ತೆ, ಈಟಿವಿ ಭಾರತ
ಸಂಸತ್ ಅಧಿವೇಶನವನ್ನು ಆಗಸ್ಟ್ 7ರವೆಗೆ ವಿಸ್ತರಿಸಿ ಸಂಸದೀಯ ವ್ಯವಹಾರಗಳ ಸಮಿತಿ ನಿರ್ಧಾರ ಕೈಗೊಂಡಿದೆ.
ಸಂಸತ್ತು ಅಧಿವೇಶನ ಆಗಸ್ಟ್ 7ರವರೆಗೆ ವಿಸ್ತರಣೆ
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ವಿರೋಧ ಪಕ್ಷ ಸಂಸತ್ ಅಧಿವೇಶನದ ದಿನಗಳನ್ನು ವಿಸ್ತರಿಸಬೇಕೆಂದು ಸದಾ ಪಟ್ಟು ಹಿಡಿಯುತ್ತಿತ್ತು, ನಾವು ಈಗ ಅದನ್ನು ಮಾಡಿದ್ದೇವೆ ಎಂದರು.
ಸಂಸತ್ ಅಧಿವೇಶನವು ಜೂನ್ 17 ಕ್ಕೆ ಆರಂಭಗೊಂಡಿದ್ದು ಜುಲೈ 26ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಈಗ ನಡೆಯುತ್ತಿರುವ ಅಧಿವೇಶನವನ್ನು ವಿಸ್ತರಿಸಬಹುದು ಎಂದು ಸರ್ಕಾರ ಬುಧವಾರ ತಿಳಿಸಿತ್ತು. ಇದೀಗ ಸಂಸದೀಯ ವ್ಯವಹಾರಗಳ ಸಮಿತಿ ಅಧಿವೇಶನವನ್ನು ಆಗಸ್ಟ್ 7 ರವರೆಗೆ ವಿಸ್ತರಿಸಲು ನಿರ್ಧರಿಸಿದೆ.
TAGGED:
bharat