ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಶುರುವಾಗಲಿದ್ದು, ಅಕ್ಟೋಬರ್ 1ರವರೆಗೆ ನಡೆಯಲಿದೆ. ಈಗಾಗಲೇ ಆಡಳಿತರೂಢ ಬಿಜೆಪಿ ಸೇರಿ ಎಲ್ಲಾ ಪಕ್ಷಗಳು ತಂತ್ರ, ಪ್ರತಿತಂತ್ರವನ್ನು ರೂಪಿಸಿದ್ದು, ಯಾವ ರೀತಿಯ ಅಧಿವೇಶನ ನಡೆಯಲಿದೆ ಎಂಬುದು ಎಲ್ಲರನ್ನೂ ಕುತೂಹಲದಲ್ಲಿ ಇರಿಸಿದೆ.
ಕೊರೊನಾ ಕಾರಣಕ್ಕೆ ಸಂಸತ್ತಿನ ಅಧಿವೇಶನವನ್ನು ಎರಡು ಪಾಳಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಲೋಕಸಭೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪದ ಮಾದರಿಯಲ್ಲಿ ನಡೆಸಲಾಗುತ್ತದೆ.
ಅಧಿವೇಶನಲ್ಲಿ ಚರ್ಚೆ ನಡೆಯಬಹುದು ಎಂದು ಅಂದಾಜಿಲಾದ ವಿಷಯಗಳು..
- ಕೊರೊನಾ ಸೋಂಕು
- ಭಾರತ, ಚೀನಾ ಗಡಿ ಸಮಸ್ಯೆ
- ಆರ್ಥಿಕ ಸಮಸ್ಯೆಯಿಂದ ಜಿಡಿಪಿ ಕುಸಿತ
- ಉದ್ಯೋಗ ಕಡಿತ
- ಎಪಿಎಂಸಿ ಕಾಯ್ದೆ
- ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ರದ್ದು ವಿಚಾರ