ಕರ್ನಾಟಕ

karnataka

ETV Bharat / bharat

ಐವರು ಯೋಧರು, ಐವರು ಭಯೋತ್ಪಾದಕರನ್ನು ಕೊಂದು ಹುತಾತ್ಮರಾದ ರೋಚಕ ಕಹಾನಿ..

ಏಪ್ರಿಲ್​ 5ರಂದು ಐವರು ಸೈನಿಕರ ಒಂದು ತಂಡ​ ಹೊರಗೆ ಕಾಲಿಟ್ಟಿದ್ದರು. ಈ ವೇಳೆ ಹಿಮಪಾತವಾಗಿ ಆ ಐವರ ತಂಡ ನೀರಿನ ಕಾಲುವೆಯೊಂದಕ್ಕೆ ಬಿದ್ದಿದೆ. ಅವರು ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಉಗ್ರರು ನೆಲೆಯೂರಿದ್ದು ಗಮನಕ್ಕೆ ಬಂದಾಕ್ಷಣ, ಭಯೋತ್ಪಾದಕರು ಹಾಗೂ ಮೊದಲೇ ಗಾಯಗೊಂಡಿದ್ದ ಸೇನಾಪಡೆಯ ನಡುವೆ ಗುಂಡಿನ ಚಕಮಕಿ ನಡೆಯಿತು.

martyred
ಹುತಾತ್ಮರು

By

Published : Apr 6, 2020, 8:33 PM IST

Updated : Apr 6, 2020, 8:50 PM IST

ನವದೆಹಲಿ :ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಮೂಲಕ ನುಸುಳಲು ಯತ್ನಿಸಿದ್ದ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿ ಐವರು ಭಾರತೀಯ ಯೋಧರು ಹುತಾತ್ಮರಾದ ಘಟನೆ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ನಡೆದಿದೆ. ಹಿಮಾಚಲಪ್ರದೇಶ ಮೂಲದ ಸುಬೇದಾರ್ ಸಂಜೀವ್‌ಕುಮಾರ್, ಉತ್ತರಾಖಂಡ್​ ಮೂಲದ ಹವಾಲ್ದಾರ್​ ದವೇಂದ್ರ ಸಿಂಗ್​, ಪ್ಯಾರಾಟ್ರೂಪರ್​ಗಳಾಗಿದ್ದ ಹಿಮಾಚಲಪ್ರದೇಶ ಮೂಲದ ಸಿಪಾಯಿ​ ಬಾಲಕೃಷ್ಣ, ಉತ್ತರಾಖಂಡ ಮೂಲದ ಸಿಪಾಯಿ ಅಮೀತ್‌ಕುಮಾರ್ ಹಾಗೂ ಸಿಪಾಯಿ ಛತ್ರಪಾಲ್‌ ಸಿಂಗ್ ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕರನ್ನು ಕೊಂದು ತಾವೂ ಹುತಾತ್ಮರಾಗಿದ್ದಾರೆ.

ಘಟನೆಯ ವಿವರ ಹೀಗಿದೆ :ಏಪ್ರಿಲ್​ 1ರಂದು ಲೈನ್​ ಆಫ್​ ಕಂಟ್ರೋಲ್​ ಬಳಿ ಭಯೋತ್ಪಾದಕರು ದೇಶದೊಳಗೆ ನುಸುಳುವ ಅನುಮಾನ ರಕ್ಷಣಾ ಇಲಾಖೆಗೆ ಬಂದಿತ್ತು. ಭಾರೀ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದ ಪ್ರಯೋಜನ ಪಡೆದು ದೇಶದ ಒಳ ನುಸುಳಿ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಮುಂದಾಗಿದ್ದರು. ಇದನ್ನು ತಡೆಯುವ ಸಲುವಾಗಿ ಆ ಸ್ಥಳಕ್ಕೆ ವಿಶೇಷ ಮಿಲಿಟರಿ ಪಡೆ ನಿಯೋಜಿಸಿ ಭಯೋತ್ಪಾದಕರಿಗಾಗಿ ಎರಡು ದಿನಗಳ ಕಾಲ ಶೋಧ ಕಾರ್ಯ ಮುಂದುವರೆಸಲಾಗಿತ್ತು.

ಏಪ್ರಿಲ್​ 1ರಂದು ಶೋಧ ಕಾರ್ಯ ನಡೆಸುತ್ತಿರುವ ವೇಳೆ ಐದು ಬ್ಯಾಗ್​ ಸಿಕ್ಕಿ ಭಯೋತ್ಪಾದಕರ ಸುಳಿವನ್ನು ಬಿಟ್ಟುಕೊಟ್ಟಿದ್ದವು. ಈ ವೇಳೆ ಮತ್ತಷ್ಟು ಸೇನೆಯನ್ನು ಕರೆಸಿಕೊಳ್ಳಲಾಯಿತು. ಆದರೆ, ಶೋಧ ಕಾರ್ಯ ವಿಫಲವಾಗಿತ್ತು. ಏಪ್ರಿಲ್​ 3ರ ಸಂಜೆ 4.30ಕ್ಕೆ ಹಾಗೂ ಮತ್ತೆ ಏಪ್ರಿಲ್​ 4ರ ಸಂಜೆ 6.30ಕ್ಕೆ ಭಯೋತ್ಪಾದಕರ ಜಾಡು ಪತ್ತೆ ಹಚ್ಚಲಾಯಿತು. ಜಾಡು ಪತ್ತೆ ಹಚ್ಚಿದ ನಂತರ ಭಯೋತ್ಪಾದಕರ ವಿರುದ್ಧ ಹೋರಾಡಲು ನೈಪುಣ್ಯತೆ ಪಡೆದ ಪ್ಯಾರಾ ಸ್ಪೆಷಲ್​ ಫೋರ್ಸ್‌ನ ಸ್ಥಳಕ್ಕೆ ನಿಯೋಜಿಸಲಾಯಿತು. ವೈಮಾನಿಕ ವಾಹನವೊಂದರ ದೃಶ್ಯ ಆಧಾರಿತವಾಗಿ ನೋಡುವುದಾದರೆ ಸ್ಪೆಷಲ್ ಫೋರ್ಸ್‌ನ ಉಗ್ರರಿರುವ ಸ್ಥಳದಲ್ಲಿ ಹೆಲಿಕಾಪ್ಟರ್ ಮೂಲಕ ಇಳಿಸಲಾಯಿತು. ಹೆಚ್ಚಿನ ಹಿಮ ಸುರಿಯುತ್ತಿದ್ದ ಕಾರಣ ಬೆಟಾಲಿಯನ್‌ ಅಲ್ಲಿಯೇ ನೆಲೆಯೂರಬೇಕಾಯ್ತು.

ಏಪ್ರಿಲ್​ 5ರಂದು ಐವರು ಸೈನಿಕರ ಒಂದು ತಂಡ​ ಹೊರಗೆ ಕಾಲಿಟ್ಟಿದ್ದರು. ಈ ವೇಳೆ ಹಿಮಪಾತವಾಗಿ ಆ ಐವರ ತಂಡ ನೀರಿನ ಕಾಲುವೆಯೊಂದಕ್ಕೆ ಬಿದ್ದಿದೆ. ಅವರು ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಉಗ್ರರು ನೆಲೆಯೂರಿದ್ದು ಗಮನಕ್ಕೆ ಬಂದಾಕ್ಷಣ, ಭಯೋತ್ಪಾದಕರು ಹಾಗೂ ಮೊದಲೇ ಗಾಯಗೊಂಡಿದ್ದ ಸೇನಾಪಡೆಯ ನಡುವೆ ಗುಂಡಿನ ಚಕಮಕಿ ನಡೆಯಿತು. ತುಂಬಾ ಹತ್ತಿರದಿಂದ ನಡೆದ ಈ ದಾಳಿಯಲ್ಲಿ ಐವರಿದ್ದ ಭಯೋತ್ಪಾದಕರ ಗುಂಪನ್ನ ಮಟ್ಟ ಹಾಕುವಾಗ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸುಬೇದಾರ್ ಸಂಜೀವ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅವರೂ ಹುತಾತ್ಮರಾಗಿದ್ದಾರೆ.

Last Updated : Apr 6, 2020, 8:50 PM IST

ABOUT THE AUTHOR

...view details