ಔರಂಗಾಬಾದ್(ಮಹಾರಾಷ್ಟ್ರ) :ತಮ್ಮ ಟ್ವಿಟರ್ ಪ್ರೊಫೈಲ್‌ನಿಂದ ಪಕ್ಷದ ಹೆಸರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ತೆಗೆದುಹಾಕಿ ಅಚ್ಚರಿ ಮೂಡಿಸಿದ್ದ ಮಹಾರಾಷ್ಟ್ರ ಬಿಜೆಪಿ ನಾಯಕಿ ಪಂಕಜಾ ಮುಂಡೆ, ಯಾವುದೇ ಕಾರಣಕ್ಕೂ ಬಿಜೆಪಿ ಕೋರ್ ಕಮಿಟಿಯಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷ ಬಿಡಲ್ಲ ಆದ್ರೆ ಬಿಜೆಪಿ ಕೋರ್ ಕಮಿಟಿಯಲ್ಲೂ ಇರಲ್ಲ: ಪಂಕಜಾ ಮುಂಡೆ - ಬಿಜೆಪಿ ಮುಖಂಡೆ ಪಂಕಜಾ ಮುಂಡೆ
ಮೇಲಿಂದ ಮೇಲೆ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುತ್ತಿರುವ ಮಹಾರಾಷ್ಟ್ರ ಬಿಜೆಪಿ ನಾಯಕಿ ಪಂಕಜಾ ಮುಂಡೆ ಇದೀಗ ಮತ್ತೊಂದು ನಿರ್ಧಾರ ಕೈಗೊಂಡು ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇವೇಂದ್ರ ಫಡ್ನವೀಸ್ ನೇತೃತ್ವದ ರಾಜ್ಯ ಬಿಜೆಪಿ ಯಾವುದೇ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ನನಗೆ ಹೇಳಿಕೊಳ್ಳುವಷ್ಟು ಮಹತ್ವ ನೀಡಿಲ್ಲ. ಹೀಗಾಗಿ ನಾನು ಕೋರ್ ಕಮಿಟಿಯಿಂದ ಹೊರ ಹೊಗುತ್ತಿದ್ದೇನೆ ಎಂದು ತಿಳಿಸಿದ್ರು.
ಔರಂಗಾಬಾದ್ನಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಮಾಜಿ ಸಚಿವೆಯೂ ಆಗಿರುವ ಪಂಕಜಾ ಮುಂಡೆ, ಎನ್ಸಿಪಿಯ ಧನಂಜಯ್ ಮುಂಡೆ ವಿರುದ್ಧ ಹೀನಾಯ ಸೋಲು ಕಂಡಿದ್ದರು. ಇದಾದ ಬಳಿಕ ಅವರು ಬೇರೆ ಪಕ್ಷ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಂದಿದ್ದವು. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದಿರುವ ಮುಂಡೆ, ಇದು ನನ್ನ ಪಕ್ಷ, ನನ್ನ ತಂದೆ ಬೆಳೆಸಿರುವ ಪಕ್ಷ ಎಂದು ಸ್ಪಷ್ಟಪಡಿಸಿದ್ದಾರೆ.