ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ದಾಳಿಯಿಂದ ಕಂಗಾಲಾಗಿರುವ ಪೀಡಿತರಿಗೆ ಸಹಾಯ ಮಾಡಲು, ಸಂಶೋಧಕರು ಬಯೋಫೀಡ್‌ಬ್ಯಾಕ್ ತರಹದ ನಿರ್ವಹಣೆಯನ್ನು ಅಳವಡಿಸಿಕೊಳ್ಳುವ 'ಪ್ಯಾನಿಕ್ ಮೆಕ್ಯಾನಿಕ್' ಎಂಬ ಅಪ್ಲಿಕೇಶನ್‌ನ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮೊಬೈಲ್ ಫೋನ್‌ನಲ್ಲಿ ಬಳಸಿ ಪೀಡಿತರು ತಮ್ಮ ಆತಂಕವನ್ನು ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ.
ಬಯೋಫೀಡ್‌ಬ್ಯಾಕ್ ಎಲೆಕ್ಟ್ರಾನಿಕ್ ಅಥವಾ ಇತರ ಸಾಧನಗಳನ್ನು ಬಳಸುವುದರ ಮೂಲಕ ಮತ್ತು ದೇಹದೊಳಗಿನ ಆಗುಹೋಗುಗಳನ್ನು ತಮ್ಮ ಇಚ್ಛೆಯಂತೆ ಕುಶಲತೆಯಿಂದ ನಿರ್ವಹಿಸುವ ಗುರಿಯೊಂದಿಗೆ ತಮ್ಮ ಸ್ವಂತ ದೇಹದ ಅನೇಕ ಶಾರೀರಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಅರಿವು ಪಡೆಯುವ ಪ್ರಕ್ರಿಯೆಯಾಗಿದೆ. 'ಪ್ಯಾನಿಕ್ ಮೆಕ್ಯಾನಿಕ್' ಅಪ್ಲಿಕೇಶನ್ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಕೆಲಸ ಮಾಡಬಹುದು ಮತ್ತು ಇದನ್ನು ವೃತ್ತಿಪರರ ಕ್ಲಿನಿಕಲ್ ಆರೈಕೆಗೆ ಪೂರಕವಾಗಿ ಬಳಸಲಾಗುತ್ತದೆ'.
ಫೋಟೊಪ್ಲೆಥಿಸ್ಮೋಗ್ರಫಿಗೆ ಹೋಲುವ ವಿಧಾನವನ್ನು ಬಳಸಿ ದೇಹದೊಳಗಿನ ಭಯದ ಪ್ರತಿಕ್ರಿಯೆಯನ್ನು ಅಳೆಯಲು ಸೆಲ್ ಫೋನ್‌ನಲ್ಲಿ ಕ್ಯಾಮೆರಾವನ್ನು ಪ್ಯಾನಿಕ್ ಮೆಕ್ಯಾನಿಕ್ ಬಳಸುತ್ತದೆ. ಈ ಅಪ್ಲಿಕೇಶನ್‌ನ ಸಕ್ರಿಯಗೊಳಿಸಿ ನಂತರ ಫ್ಲ್ಯಾಪ್ ಎದುರಿನಲ್ಲಿ ನಿಮ್ಮ ಬೆರಳನ್ನು ಹಿಡಿದಿಟ್ಟುಕೊಂಡರೆ, ಅದು ಒತ್ತಡಕ್ಕೆ ನಿಮ್ಮ ಪ್ರತಿಕ್ರಿಯೆಯ ವಸ್ತುನಿಷ್ಠ ಅಳತೆಯುತ್ತದೆ" ಎಂದು ಯುಎಸ್‌ನ ವರ್ಮೊಂಟ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ಅಪ್ಲಿಕೇಶನ್‌ನ ಸಹ-ಅಭಿವೃದ್ಧಿಕಾರ ರಿಯಾನ್ ಮೆಕ್‌ಗಿನ್ನಿಸ್ ಹೇಳುತ್ತಾರೆ. ಭಯವು ನಿಮ್ಮನ್ನು ಹಿಡಿದಿಡುತ್ತದೆ ಮತ್ತು ನೀವು ನಿಮ್ಮ ದೇಹದೊಂದಿಗೆ ನಿಯಂತ್ರಣದಲ್ಲಿಲ್ಲ ಎಂಬ ಭಾವನೆ ನೀಡುತ್ತದೆ.
“ಅವರ ದೈಹಿಕ ಪ್ರಚೋದನೆಯ ಮಾದರಿಗಳನ್ನು ಯಾರಿಗಾದರೂ ತೋರಿಸುವುದರ ಮೂಲಕ, ಅವರ ಭಯದ ಪ್ರತಿಕ್ರಿಯೆಯ ಮೇಲೆ ನಿಯಂತ್ರಣವನ್ನು ಪಡೆಯಲು ಇದು ಸಹಾಯ ಮಾಡುತ್ತದೆ "ಎಂದು ಅಪ್ಲಿಕೇಶನ್‌ನ ಡೆವಲಪರ್‌ಗಳಲ್ಲಿ ಒಬ್ಬರಾದ ಎಲ್ಲೆನ್ ಮೆಕ್‌ಗಿನ್ನಿಸ್ ಹೇಳಿದ್ದಾರೆ. ಭಯಗೊಂಡವರಿಗೆ ಆ ಸಮಯದಲ್ಲಿ ಏನಾದರೂ ಮಾಡಲು ಇದು ಅವಕಾಶ ಮಾಡಿಕೊಡುವುದರಿಂದ ಇದು ಅಪ್ಲಿಕೇಷನ್ ಭಯ ನಿಯಂತ್ರಣದಲ್ಲಿ ಕೆಲಸ ಮಾಡುತ್ತದೆ.