ಪಂಚಕುಲ(ಹರಿಯಾಣ): 2019ರ ಮೇ ತಿಂಗಳಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಹಾಗೂ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಕುಲ ಕೋರ್ಟ್ ಮಹತ್ವದ ತೀರ್ಪು ಹೊರಹಾಕಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಗೊಳಿಸಿದೆ.
ಅಪ್ರಾಪ್ತೆ ರೇಪ್ ಆ್ಯಂಡ್ ಮರ್ಡರ್ ಕೇಸ್... ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್! - ಅಪ್ರಾಪ್ತೆ ರೇಪ್ ಆ್ಯಂಡ್ ಮರ್ಡರ್ ಕೇಸ್
ಐದು ವರ್ಷದ ಬಾಲಕಿ ರೇಪ್ ಆ್ಯಂಡ್ ಮರ್ಡರ್ ಕೇಸ್ಗೆ ಸಂಬಂಧಿಸಿದಂತೆ ಪಂಚಕುಲ ಕೋರ್ಟ್ ಮಹತ್ವದ ಆದೇಶ ಹೊರಹಾಕಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಅಪಹರಣ ಮಾಡಿದ್ದ ಬಾಲಕನೋರ್ವ ಆಕೆಯ ಮೇಲೆ ಅತ್ಯಾಚಾರವೆಸಗಿ ತದನಂತರ ಭೀಕರವಾಗಿ ಕೊಲೆ ಮಾಡಿ ಶಾಲೆಯ ಹಿಂದಿನ ಗೊಡೆ ಬಳಿ ಶವ ಎಸೆದು ಪರಾರಿಯಾಗಿದ್ದನು. ಬಾಲಕಿ ಮನೆಗೆ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದಾಗ 17 ವರ್ಷದ ಬಾಲಕ ಈ ಕೃತ್ಯವೆಸಗಿದ್ದಾಗಿ ತಿಳಿದು ಬಂದಿತ್ತು. ಆತನ ಬಂಧನ ಮಾಡಿದ್ದ ಪೊಲೀಸರು ವಿಚಾರಣೆ ನಡೆಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಆತನಿಗೆ 18 ವರ್ಷ ಆಗಿದ್ದು, ಕೋರ್ಟ್ನಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ.