ಕರ್ನಾಟಕ

karnataka

ETV Bharat / bharat

ಪೊಲೀಸರು - ರೈತರ ನಡುವಣ ದಿಲ್ಲಿ ದಂಗಲ್: 1000 ಅಪರಿಚಿತ ಆರೋಪಿಗಳ ವಿರುದ್ಧ ಕೇಸ್ - ನಿನ್ನೆ ಪೊಲೀಸರು ರೈತರ ನಡುವೆ ಸಂಘರ್ಷ

ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಗಡ್ಪುರಿ ಪೊಲೀಸ್ ಠಾಣೆಯ ಪೊಲೀಸರ ದೂರಿನ ಮೇರೆಗೆ 1000 ಅಪರಿಚಿತ ಆರೋಪಿಗಳ ಮೇಲೆ ಪೊಲೀಸರು ಕೇಸ್​ ದಾಖಲಿಸಿದ್ದಾರೆ.

1000 ಅಪರಿಚಿತ ಆರೋಪಿಗಳ ಮೇಲೆ ಕೇಸ್
1000 ಅಪರಿಚಿತ ಆರೋಪಿಗಳ ಮೇಲೆ ಕೇಸ್

By

Published : Jan 27, 2021, 11:46 AM IST

ಪಾಲ್ವಾಲ್:ಟ್ರ್ಯಾಕ್ಟರ್ ಪರೇಡ್ ವೇಳೆ ಸಾಫ್ತಾ ಮೊರ್​ನಲ್ಲಿ ಪೊಲೀಸರು ಮತ್ತು ರೈತರು ಮುಖಾಮುಖಿಯಾದ ಪ್ರಕರಣದಲ್ಲಿ ಗಡ್ಪುರಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ಸಾವಿರ ಜನರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.

1000 ಅಪರಿಚಿತ ಆರೋಪಿಗಳ ಮೇಲೆ ಪೊಲೀಸರು 307, 323 ಮತ್ತು 186 ಸೆಕ್ಷನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೊಲೆ ಯತ್ನ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕೇಸ್​ ದಾಖಲಿಸಿದ್ದಾರೆ.

ಇದನ್ನೂ ಓದಿ:ರೈತರ ಟ್ರ್ಯಾಕ್ಟರ್ ಪರೇಡ್: ದೆಹಲಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ.. - ವಿಡಿಯೋ

ಗಡ್ಪುರಿ ಪೊಲೀಸ್ ಠಾಣೆಯ ಪೊಲೀಸರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ಇದು ವರೆಗೆ ಈ ಸಂಬಂಧ ಪೊಲೀಸರು ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಅಥವಾ ಯಾರನ್ನು ಬಂಧಿಸಿಲ್ಲ.

ABOUT THE AUTHOR

...view details