ಕರ್ನಾಟಕ

karnataka

ETV Bharat / bharat

ತಾಳೆ ಎಣ್ಣೆ ಆಮದು ನಿಷೇಧಿಸಿದ್ರೂ ನಾವು ಟೀಕಿಸುವುದನ್ನ ನಿಲ್ಲಿಸೋಲ್ಲ:  ಮಲೇಷ್ಯಾ ಪ್ರಧಾನಿ ಟಾಂಗ್​ - ಭಾರತೀಯ ಪಾಮ್ ಆಯಿಲ್ ಖರೀದಿ

ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರ ಕುರಿತು ಮಲೇಷ್ಯಾ ಪ್ರಧಾನಿ ಟೀಕಿಸಿದ್ರು. ಇದರ ಪರಿಣಾಮ ಭಾರತ ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ, ಸಂಸ್ಕರಿಸಿದ ತಾಳೆ ಎಣ್ಣೆ ಆಮದನ್ನು ನಿಷೇಧಿಸಿದೆ.

'Palm oil import
ಮಲೇಷ್ಯಾ ಪ್ರಧಾನಿ

By

Published : Jan 15, 2020, 1:41 PM IST

ಕೌಲಾಲಂಪುರ್:ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಂಸ್ಕರಿಸಿದ ತಾಳೆ ಎಣ್ಣೆಯನ್ನು ನಿರ್ಬಂಧಿಸಿರುವುದಕ್ಕೆ, ಮಲೇಷ್ಯಾ ಪ್ರಧಾನಿ ಮಹಾತಿರ್​​ ಮೊಹಮ್ಮದ್​​ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಮಲೇಷ್ಯಾ ಪ್ರಧಾನಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರ ಕುರಿತು ಟೀಕಿಸಿದ್ರು. ಆದ್ರೆ ಈ ರೀತಿ ನಿಷೇಧ ಮಾಡುವುದರಿಂದ ನಾವು ಟೀಕಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದ ಈ ಕ್ರಮದಿಂದ ನಮಗೆ ಆರ್ಥಿಕ ಹಿನ್ನಡೆ ಉಂಟಾದರೂ, ಅವುಗಳ ವಿರುದ್ಧ ಮಾತನಾಡುವುದನ್ನು ನಾನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಭಾರತದ ನೂತನ ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ) ಮಹಾತಿರ್ ಮುಹಮ್ಮದ್ ಕಟುವಾಗಿ ಟೀಕಿಸಿದ್ದರು. ಹಾಗಾಗಿ ಆ ದೇಶದಿಂದ ತರಿಸಿಕೊಳ್ಳಲಾಗುತ್ತಿದ್ದ ತಾಳೆ ಎಣ್ಣೆ ಆಮದಿನ ಮೇಲೆ ಭಾರತ ನಿರ್ಬಂಧ ವಿಧಿಸಿದೆ.

ಭಾರತೀಯ ಪಾಮ್ ಆಯಿಲ್ ಖರೀದಿದಾರರು ಮಲೇಷ್ಯಾದ ಕಚ್ಚಾ ತಾಳೆ ಎಣ್ಣೆಯ ರಫ್ತು ಹೆಚ್ಚಿಸಲು ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಯ ರಫ್ತು ಕಡಿಮೆ ಮಾಡಲು ಭಾರತ ಈ ರೀತಿ ಮಾಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಭಾರತದ ನಿರ್ಬಂಧ ಹಿನ್ನೆಲೆಯಲ್ಲಿ, ಮಲೇಷ್ಯಾದ ತಾಳೆ ಎಣ್ಣೆ ಸಂಸ್ಕರಣೆ ಘಟಕಗಳು ವ್ಯಾಪಾರ ಕಳೆದುಕೊಂಡಿವೆ. ಇದಕ್ಕೆ ಸರ್ಕಾರ ಪರಿಹಾರವೊಂದನ್ನು ಕಂಡುಕೊಳ್ಳಲಿದೆ ಎಂದು ಮಹತಿರ್ ಹೇಳಿದ್ದಾರೆ.

ABOUT THE AUTHOR

...view details